ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಯ್ಯೋ ಶಿವನೇ... ಡ್ರಗ್ಸ್ ಕುರಿತ ತನಿಖೆ ಮಾಡೋರು ಮೋದಿಗೆ ಆಪ್ತರಂತೆ..!

ನವದೆಹಲಿ: ಸದ್ಯ ಸಾಕಷ್ಟು ಸುದ್ದಿಯಲ್ಲಿರುವ ಡ್ರಗ್ಸ್ ತನಿಖೆ ಮಾಡುತ್ತಿರುವ ಎನ್ ಸಿಬಿ ಅಧಿಕಾರಿಗಳು ಬಿಜೆಪಿಗೆ ತುಂಬಾ ಆಪ್ತರು ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಆರೋಪಿಸಿದ್ದಾರೆ.

ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ತನಿಖೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ವಿವಿಧ ತನಿಖಾ ದಳಗಳು ನಡೆಸುತ್ತಿವೆ. ಸುಶಾಂತ್ ಸಾವಿನೊಂದಿಗೆ ಥಳುಕು ಹಾಕಿಕೊಂಡಿರುವ ಮಾದಕ ದ್ರವ್ಯದ ಬಗ್ಗೆ ತನಿಖೆ ನಡೆಸುತ್ತಿರುವ ಎನ್​ಸಿಬಿ ಈಗಾಗಲೇ ಹಲವರ ವಿಚಾರಣೆ ನಡೆಸಿದೆ. ಆದರೆ, ಈ ಡ್ರಗ್ಸ್​ ಲಿಂಕ್​ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಬಿಜೆಪಿಗೆ ತುಂಬ ಆಪ್ತರು ಎಂದು ಆರೋಪಿಸಿದ್ದಾರೆ.

ಡ್ರಗ್ಸ್​ ಬಗ್ಗೆ ತನಿಖೆ ನಡೆಸುತ್ತಿರುವ ಎನ್​ಸಿಬಿ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ತುಂಬ ಆಪ್ತರಾಗಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಆಟ ಆಡುತ್ತಿದೆ ಎಂದು ನೇರವಾಗಿ ಆರೋಪಿಸಿದ್ದಾರೆ.

Edited By :
PublicNext

PublicNext

26/09/2020 10:31 pm

Cinque Terre

87.9 K

Cinque Terre

18

ಸಂಬಂಧಿತ ಸುದ್ದಿ