ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಹೆಸರು ಬೆಳೆ ಸಂಪೂರ್ಣ ಹಾಳಾಗಿದೆ: ಕೃಷಿ ಸಚಿವ ಬಿ.ಸಿ ಪಾಟೀಲ್

ಗದಗ: ಕಳೆದ ವರ್ಷ 18 ಲಕ್ಷ ರೈತರಿಗೆ 2250 ಕೋಟಿ ಬೆಳೆ ಪರಿಹಾರ ನೀಡಲಾಗಿದೆ. ಈ ವರ್ಷದಲ್ಲಿ ನಮ್ಮ ರಾಜ್ಯದಲ್ಲಿಯೇ ಗದಗ ಜಿಲ್ಲೆ ಅತಿಯಾದ ಹಾನಿಯಾದ ಪ್ರದೇಶವಾಗಿದೆ. ಜಿಲ್ಲೆಯಲ್ಲಿ 93 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ.

ಇನ್ನು ಹೆಸರು ಬೆಳೆಯು ಸಂಪೂರ್ಣ ನಾಶವಾಗಿದೆ. ಒಟ್ಟು 73 ಸಾವಿರ ಹೆಕ್ಟೇರ್ ಹೆಸರು ನಾಶವಾಗಿದೆ. ನರಗುಂದ, ಡಂಬಳ, ಹರಳಗೇರೆ, ವೆಂಕಟಾಪೂರ, ನವಲಗುಂದ ಭಾಗದಲ್ಲಿ ಕುಯ್ಲಿಗೆ ಬಂದ ಹೆಸರು ಗಿಡದಲ್ಲಿಯೇ ಮೊಳಕೆ ಒಡೆಯುತ್ತಿದೆ. ಒಟ್ಟು 100℅ ಹಾನಿಯಾಗಿದೆ. ರಾಜ್ಯ ಸರಕಾರ ರೈತರಿಗೆ ಎನ್‌ಡಿಆರ್ಎಫ್‌ನಲ್ಲಿ ಪ್ರತಿ ಹೆಕ್ಟೇರ್ಗೆ 13,600 ರೂ. ಪರಿಹಾರ ನೀಡುತ್ತಿದೆ ಎಂದು ಬಿ.ಸಿ ಪಾಟೀಲ್ ಹೇಳಿದರು.

Edited By : Nagesh Gaonkar
PublicNext

PublicNext

10/08/2022 08:12 am

Cinque Terre

124.89 K

Cinque Terre

2

ಸಂಬಂಧಿತ ಸುದ್ದಿ