ಗದಗ: ರಾಜ್ಯದಲ್ಲೇ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಅತ್ಯಧಿಕ ಹಾನಿಗೊಳಗಾದ ಜಿಲ್ಲೆ ಅಂದ್ರೆ ಅದು ಗದಗ. ವಿದೇಶಕ್ಕೆ ಹೋಗಿದ್ದ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ ಇಂದು ಗದಗ ಜಿಲ್ಲೆಗೆ ದಿಢೀರ್ ಭೇಟಿ ನೀಡಿದ್ರು. ಅಧಿಕಾರಿಗಳು ಗುರ್ತಿಸಿದ್ದ 2 ಹಳ್ಳಿ 2 ಹೊಲ ವೀಕ್ಷಣೆ ಮಾಡಿದ್ರು.
15 ನಿಮಿಷದಲ್ಲಿ ಗದಗ ಪಕ್ಕದ ಹೊಂಬಳ, ಎಚ್.ಎಸ್ ವೆಂಕಟಾಪೂರ ಜಮೀನು ವೀಕ್ಷಣೆ ಮಾಡಿದ್ರು. ನಂತರ ನರಗುಂದ ತಾಲೂಕಿನ ಕುರ್ಲಗೇರಿ ಪಕ್ಕದ ಜಮೀನಿಗೆ ಭೇಟಿ ನೀಡಿದರು. ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ತರಾತುರಿಯಲ್ಲಿ ರಸ್ತೆ ಪಕ್ಕದ ಒಂದೆರೆಡು ಜಮೀನಿನ ಹೆಸರು, ಶೇಂಗಾ, ಉದ್ದು, ಮೆಕ್ಕೆಜೋಳ ಬೆಳೆ ವಿಕ್ಷಣೆ ಮಾಡಿ ಹೊರಹೊದ್ರು.
ಗದಗ ಜಿಲ್ಲೆಯಲ್ಲಿ ಈ ವರೆಗೆ 93 ಸಾವಿರ ಕ್ಕೂ ಅಧಿಕ ಹೆಕ್ಟೇರ್ ಬೆಳೆ ನಾಶವಾಗಿದೆ. ಅದರಲ್ಲಿ 70 ಸಾವಿರ ಹೆಕ್ಟೇರ್ ಹೆಸರು ಬೆಳೆಯೇ ನಾಶವಾಗಿದೆ. 934 ಮನೆಗಳು ಜಖಂಗೊಂಡಿವೆ. 41 ಗ್ರಾಮಗಳು ಜಲಾವೃತಗೊಂಡಿವೆ. 277 ಕಿಲೋಮೀಟರ್ ರಸ್ತೆ ದುರಸ್ತಿ ಆಗಬೇಕಿದೆ. ಒಂದು ಜೀವಹಾನಿ, 2 ಜಾನುವಾರು ಹಾನಿಯಾಗಿವೆ. ಮಲಪ್ರಭಾ, ಬೆಣ್ಣೆ ಹಳ್ಳ, ತುಂಗಭದ್ರಾ ನದಿ ಪ್ರವಾಹದಿಂದ ಜಿಲ್ಲೆ ತತ್ತರಿಸಿದ್ದಾರೆ. ಕಳೆದೊಂದು ತಿಂಗಳಿಂದ ಜಿಲ್ಲೆಗೆ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿಗಳಿಲ್ಲ. ಇತ್ತ ಉಸ್ತುವಾರಿ ಸಚಿವರು ವಿದೇಶಕ್ಕೆ ಹೋಗಿ ಈಗ ಕಳ್ಳ ಬೇಕ್ಕಿನಂತೆ ಬಂದು ಹೋದ್ರು. ಇಂತಹ ಕಷ್ಟದ ಸಂದರ್ಭದಲ್ಲೂ ಸಚಿವರು, ಅಧಿಕಾರಿಗಳಿಲ್ಲ. ಯಾರ ಬಳಿ ನಮ್ಮ ಅಳಲು ಹೇಳಿಕೊಳ್ಳಬೇಕು. ನೆಪ ಮಾತ್ರಕ್ಕೆ ಭೇಟಿ ನೀಡಿದ್ರೆ ಹೇಗೆ ಎಂಬುದು ರೈತರ ಆಕ್ರೋಶದ ಪ್ರಶ್ನೆಯಾಗಿದೆ.
ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ್ರು ಎಂಬಂತೆ ಎಲ್ಲಾ ಸರ್ವನಾಶವಾದ ಮೇಲೆ ಸಚಿವರು ಬಂದು ಅಧಿಕಾರಿಗಳ ಸಭೆ ಮಾಡಿದ್ದಾರೆ. ಬೇಕಾಬಿಟ್ಟಿ ಭೇಟಿ, ನಂತರ ಅಧಿಕಾರಿಗಳ ಕಾಟಾಚಾರದ ಸಭೆ, ಇದು ತಮ್ಮ ಲೆಕ್ಕ ಪುಸ್ತಕಕ್ಕೆ ಮಾತ್ರ ಸೀಮಿತವಾದಂತಿದೆ. ಜನಸಾಮಾನ್ಯರ ಅಳಲು ಕೇಳಲ್ಲ ಎಂಬುದಂತೂ ಸತ್ಯ.
PublicNext
09/08/2022 10:49 pm