ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತನ ಭೂಮಿಗೆ ಸಕಾಲಕ್ಕೆ ನೀರು ಕೊಡೋದೆ ನಮ್ಮ ಕೆಲಸ : ಜೆ ಸಿ ಮಾಧುಸ್ವಾಮಿ

ವರದಿ- ಸಂತೋಷ ಬಡಕಂಬಿ

ಅಥಣಿ : ರೈತ ಸ್ವಾಭಿಮಾನದ ಬದುಕು ಬದುಕಬೇಕಾದರೆ ಅವನ ಭೂಮಿಗೆ ನೀರು ಕೊಟ್ಟರೆ ಬಂಗಾರದಂತಹ ಬೆಳೆ ಬೆಳೆಯಲು ಸಾಧ್ಯವಾಗಿ ಅವನು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳ ಸಾಧ್ಯವಾಗುತ್ತದೆ ಎಂದು ಸಣ್ಣ ನೀರಾವರಿ ಮತ್ತು ಕಾನೂನ ಹಾಗೂ ಸಂಸದಿಯ ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದರು.

ಅಥಣಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ಹೊಸ ಕೆರೆ ನಿರ್ಮಾಣ ಮತ್ತು ಒಟ್ಟು 9 ಕೆರೆಗಳಿಗೆ ಕೃಷ್ಣಾನದಿಯಿಂದ ನೀರು ತುಂಬಿಸುವ ಸುಮಾರು 149 ಕೊ.ರೂಗಳ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿ ಅವರು ಮಾತನಾಡಿದರು.

ರಾಜ್ಯದ ಬರಡು ಪ್ರದೇಶದಲ್ಲಿ ಕೆರೆಗಳ ನಿರ್ಮಾಣ ಮಾಡುವದರಿಂದ ಅಂತರ್ಜಲ ಅಭಿವೃದ್ಧಿಯಾಗುತ್ತದೆ. ಕೇವಲ ನದಿ ಪಾತ್ರದ ನೀರನ್ನು ಜನರಿಗೆ ಒದಗಿಸುವುದು ನಮ್ಮ ಆದ್ಯತೆ ಅಷ್ಟೇ ಅಲ್ಲ. ಕೊಳಚೆ ನೀರು ಮತ್ತು ಅನಾವಶ್ಯಕವಾಗಿ ಹರಿದು ಹೋಗುವ ನೀರನ್ನು ತಡೆದು ಶುದ್ಧೀಕರಣ ಮಾಡಿ ಕುಡಿಯಲು ಯೋಗ್ಯವಾದ ನೀರು ಒದಗಿಸುವುದು ಆಗಿದೆ.

ಬೆಂಗಳೂರಿನಲ್ಲಿನ ಅಪಾರವಾದ ಕಲುಷಿತ ನೀರನ್ನು ಬಳಸಿ ಶುದ್ಧೀಕರಿಸಿ ಕುಡಿಯಲು ಯೋಗ್ಯವಾದ ನೀರನ್ನು ಪ್ರತಿ ಮನೆ ಮನೆಗೆ ಒದಗಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನರ ಮನಸ್ಸಿನಲ್ಲಿ ಶ್ವಾಶತವಾದ ಸ್ಥಾನ ನಮ್ಮದಾಗಬೇಕು ಎಂದರು.

ನಂತರ ಪ್ರಾಸ್ಥಾವಿಕವಾಗಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ. ಅಥಣಿ ಪಟ್ಟಣದ ಬಹುದಿನಗಳ ಬೇಡಿಕೆಯಾದ ನಿರಂತರ ಶುದ್ಧೀಕರಣ ನೀರನ್ನು ಒದಗಿಸುವ ಕಾರ್ಯ ಸದ್ಯದಲ್ಲಿಯೇ ಕಾರ್ಯರೂಪಕ್ಕೆ ಬರಲಿದೆ ಅಲ್ಲದೇ ನದಿಪಾತ್ರದ ಗ್ರಾಮಗಳಿಗೂ ಹರ ಘರ ಕೃಷ್ಣೆ ಎಂಬ ಹೆಸರಿನೊಂದಿಗೆ ಮನೆ ಮನೆಗೆ ಶುದ್ದ ಕುಡಿಯುವ ನೀರು ಒದಗಿಸಲಾಗುವುದು.

ಒಬ್ಬ ಮುತ್ಸದ್ದಿ ರಾಜಕಾರಣಿ ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ಹೇಗೆ ಜಾರಿಗೆ ತರಬಲ್ಲ ಎಂಬುದಕ್ಕೆ ಸಚಿವ ಮಾಧುಸ್ವಾಮಿಯಿಂದ ನಾವೆಲ್ಲರೂ ಕಲಿಯಬೇಕಿದೆ. ಅವರ ಇಚ್ಛಾಶಕ್ತಿ ಅಗಾಧವಾದ ಆಲೋಚನಾ ಶಕ್ತಿಯ ಮೂಲಕ ಜನಮಾನಸದಲ್ಲಿ ಜನಪ್ರಿಯ ವ್ಯಕ್ತಿಯಾಗಿ ನಮ್ಮೆಲ್ಲರಿಗೂ ಆದರ್ಶ ರಾಜಕಾರಣಿಯಾಗಿದ್ದಾರೆ ಎಂದರು.

ಗುರುಮುರುಘರಾಜೇಂದ್ರ ಶಿವಬಸವ ಮಹಾಸ್ವಾಮಿಗಳು, ಅಮರೇಶ್ವರ ದೇವರು, ಡಾ ಮಹಾಂತ ಸ್ವಾಮಿಗಳು ಆಶೀರ್ವಚನ ನೀಡಿದರು. ಈ ವೇಳೆ ವಿಜಯಗೌಡ ಪಾಟೀಲ, ಅಪ್ಪಸಾಬ ಅವತಾಡೆ, ಚಿದಾನಂದ ಸವದಿ, ಗುರು ದಾಷ್ಯಾಳ, ಪ್ರದೀಪ ನಂದಗಾವ, ಪ್ರಶಾಂತ ಅಕ್ಕೊಳ, ಮಹಾಂತೇಶ ಠಕ್ಕಣ್ಣವರ, ಸೇರಿದಂತೆ ಸಾವಿರಾರು ಜನ ಉಪಸ್ಥಿತರಿದ್ದರು.

Edited By : Shivu K
PublicNext

PublicNext

16/07/2022 09:00 pm

Cinque Terre

62.95 K

Cinque Terre

0