ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ರೈತ ಸತ್ತಾಗಲೇ ಆತನ ಕಷ್ಟ ಅರ್ಥ ಅಗೋದು;ಬಿಜೆಪಿ ಶಾಸಕ ಬಸವರಾಜ್

ಕೊಪ್ಪಳ: ರೈತ ಆತ್ಮಹತ್ಯೆ ಮಾಡಿಕೊಡರೇ ಮಾತ್ರ ನಮಗೆ ಆತನ ಕಷ್ಟ ಅರ್ಥ ಆಗುತ್ತದೆ. ಆದರೆ, ಬೆಳೆಹಾನಿ ಆದಾಗ ಅವರ ಕಷ್ಟ ನಮಗೆ ಅರ್ಥವೇ ಆಗೋದಿಲ್ಲ ಎಂದು ಬಿಜೆಪಿಯ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ್ ದಡೇಸಗೂರು ಮಾತಿನ ಭರದಲ್ಲಿ ವಿವಾದಾತ್ಮಕ ಹೇಳಿಕೆಯನ್ನ ಕೊಟ್ಟು ಬಿಟ್ಟಿದ್ದಾರೆ.

ಕೃಷಿ ಕರ್ನಾಟಕ ರೈತರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ್ ಮಾತನಾಡಿದ್ದಾರೆ. ಮಾತಿನ ಭರದಲ್ಲಿಯೇ ರೈತರ ಪರವಾಗಿ ಮಾತನಾಡುತ್ತಲೇ, ಅವರ ಕಷ್ಟ ಅವರು ಸತ್ತ ಮೇಲೆನೆ ಅರ್ಥವಾಗುತ್ತದೆ ಅನ್ನೋ ಅರ್ಥದಲ್ಲಿಯೇ ಹೇಳಿ ಬಿಟ್ಟಿದ್ದಾರೆ.

ನಮ್ಮ ಭಾಗದಲ್ಲಿ ಸ್ವಲ್ಪ ಮಳೆಯಾಗಿ,ಬೆಳೆ ಹಾನಿಯಾಗಿದೆ. ಇದಕ್ಕೆ ಪರಿಹಾರ ಕೊಡಿಸೋ ಕೆಲಸವನ್ನೂ ಮಾಡ್ತಿನಿ ಅಂತಲೂ ಇದೇ ವೇಳೆ ಬಸವರಾಜ್ ದಡೇಸಗೂರು ಭರವಸೆ ಕೊಟ್ಟಿದ್ದಾರೆ.

Edited By :
PublicNext

PublicNext

15/05/2022 09:48 am

Cinque Terre

151.05 K

Cinque Terre

6