ದಾವಣಗೆರೆ: ಯುಗಾದಿ ಹಬ್ಬ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡುವ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ರೈತರಿಗೆ ಖುಷಿಪಡಿಸಿದರು.
ಹೊನ್ನಾಳಿ ತಾಲೂಕಿನ ಕೋಟೆಮಲ್ಲೂರು ಗ್ರಾಮದಲ್ಲಿ ರೈತರೊಂದಿಗೆ ಯುಗಾದಿ ಹಬ್ಬವನ್ನು ರೇಣುಕಾಚಾರ್ಯ ಆಚರಿಸಿದರು.
ಹೊಸ ವರ್ಷದ ಹಿನ್ನೆಲೆಯಲ್ಲಿ ಮೊದಲ ಬೇಸಾಯ ಮಾಡುವ ಯುಗಾದಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಕೋಟೆಮಲ್ಲೂರು ಗ್ರಾಮದ ಹಾಲೇಶಪ್ಪ ಗೌಡ್ರರ ನೂತನ ಟ್ಯಾಕ್ಟರ್ ನಲ್ಲಿ ಹೊಲ ಉಳುಮೆ ಮಾಡಿದರು.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಯುವಕರೊಂದಿಗೆ ಲಗೋರಿ, ಚೆಂಡಾಟವನ್ನೂ ಶಾಸಕ ರೇಣುಕಾಚಾರ್ಯ ಆಡಿದರು. ಗ್ರಾಮೀಣ ಭಾಗದ ಕ್ರೀಡೆಯನ್ನು ಆಟವಾಡಿ ಸಂಭ್ರಮಿಸಿದರು. ಇದೇ ವೇಳೆ ಗ್ರಾಮದ ವೀರಭದ್ರೇಶ್ವರ ಸ್ವಾಮೀಯ ದರ್ಶನ ಪಡೆದು ಗ್ರಾಮಸ್ಥರಿಗೆ ಯುಗಾದಿ ಹಬ್ಭದ ಶುಭಾಶಯವನ್ನು ರೇಣುಕಾಚಾರ್ಯ ಕೋರಿದರು.
PublicNext
02/04/2022 03:21 pm