ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಳೆ ಭಾರತ್ ಬಂದ್: ಬಂದ್ ಗೆ ಸಾಥ್ ನೀಡುವಂತೆ ಕಾರ್ಯಕರ್ತರಿಗೆ ಮುಖ್ಯಸ್ಥರಿಗೆ ಕಾಂಗ್ರೆಸ್ ಮನವಿ

ನವದೆಹಲಿ: ನಾಳೆ ಸೆಪ್ಟೆಂಬರ್ 27 ರಂದು ರೈತ ಸಂಘಟನೆಗಳು ಕರೆ ನೀಡಿರುವ 'ಭಾರತ್ ಬಂದ್' ನಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ತನ್ನೆಲ್ಲ ಕಾರ್ಯಕರ್ತರು, ರಾಜ್ಯ ಘಟಕದ ಮುಖ್ಯಸ್ಥರು ಮತ್ತು ಪಕ್ಷದ ಇತರೆ ಘಟಕಗಳ ಮುಖ್ಯಸ್ಥರಿಗೆ ಭಾನುವಾರ ಕರೆ ನೀಡಿದೆ.

ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ನಾಳೆ ಬಂದ್ ಗೆ ಕರೆ ನೀಡಲಾಗಿದೆ. ರೈತರ ಪ್ರತಿಭಟನೆಯ ನೇತೃತ್ವದ ವಹಿಸಿರುವ 40ಕ್ಕೂ ಹೆಚ್ಚು ಕೃಷಿ ಸಂಘಟನೆಗಳ ಒಕ್ಕೂಟ ಸಂಸ್ಥೆ ಸಂಯುಕ್ತ ಕಿಸಾನ್ ಮೋರ್ಚಾ ಈ ಹಿಂದೆ ಭಾರತ್ ಬಂದ್ ನಲ್ಲಿ ಭಾಗವಹಿಸುವಂತೆ ಜನರಿಗೆ ಮನವಿ ಮಾಡಿತ್ತು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಮಾತನಾಡಿ, ಸೋಮವಾರ ರೈತ ಸಂಘಟನೆಗಳು ಕರೆ ನೀಡಿರುವ ಶಾಂತಿಯುತ 'ಭಾರತ್ ಬಂದ್'ಗೆ ಕಾಂಗ್ರೆಸ್ ಮತ್ತು ಅದರ ಕಾರ್ಯಕರ್ತರು ತಮ್ಮ ಸಂಪೂರ್ಣ ಬೆಂಬಲ ನೀಡಲಿದ್ದಾರೆ ಎಂದು ಹೇಳಿದ್ದಾರೆ.

'ನಮ್ಮ ರೈತರ ಹಕ್ಕುಗಳಲ್ಲಿ ನಾವು ನಂಬಿಕೆಯನ್ನಿಟ್ಟಿದ್ದೇವೆ ಮತ್ತು ಕರಾಳ ಕೃಷಿ ಕಾನೂನುಗಳ ವಿರುದ್ಧದ ಹೋರಾಟದಲ್ಲಿ ಅವರಿಗೆ ಬೆಂಬಲವಾಗಿ ನಾವು ನಿಲ್ಲುತ್ತೇವೆ'. ಎಲ್ಲ ಪಿಸಿಸಿ ಅಧ್ಯಕ್ಷರು, ಇತರೆ ಘಟಕಗಳ ಮುಖ್ಯಸ್ಥರಿಗೆ ದೇಶದಾದ್ಯಂತ ಶಾಂತಿಯುತ ಭಾರತ್ ಬಂದ್ನಲ್ಲಿ ನಮ್ಮ ಅನ್ನದಾತರೊಂದಿಗೆ ನಿಲ್ಲಲು ವಿನಂತಿಸಲಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

26/09/2021 07:26 pm

Cinque Terre

39.5 K

Cinque Terre

6

ಸಂಬಂಧಿತ ಸುದ್ದಿ