ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ಕೃಷಿ ಸಚಿವರಿಂದ ರೈತರಿಗೊಂದು ದಿನ ಕಾರ್ಯಕ್ರಮ

ಚಿತ್ರದುರ್ಗ : ಕೃಷಿ ಉತ್ಪನ್ನ ಆಗುತ್ತಿದೆ, ಆದರೆ ಕೃಷಿಕ ಮಾತ್ರ ಮೇಲೆ ಬರುತ್ತಿಲ್ಲ, ಮಳೆ ಬಂದ್ರೆ ಬೆಳೆ ಬರೋಲ್ಲ, ಬೆಳೆ ಬಂದ್ರೆ ಬೆಲೆ ಬರೋಲ್ಲ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ದೇವರು ಕೊಟ್ಟ ಗ್ರಾಮದಲ್ಲಿ ರೈತರಿಗೊಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರದ ಕಾರ್ಯಕ್ರಮಗಳನ್ನು ರೈತರಿಗೆ ತಿಳಿಸಲು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ರೈತ ಯಾವತ್ತೂ ಕಷ್ಟ ಕಾಲದಲ್ಲಿಯೇ ಇದ್ದಾನೆ, ರೈತರು ಭೂವಿಗೆ ಬೀಜ ಹಾಕಿ, ಆಕಾಶವನ್ನು ನೋಡಿಕೊಂಡು ಬೆಳೆ ಬೆಳೆಯುತ್ತಿದ್ದಾರೆ. ಕೃಷಿ ಉತ್ಪನ್ನ ಆದರೆ, ಕೃಷಿಕ ಮಾತ್ರ ಮೇಲೆ ಬಂದಿಲ್ಲ ಎಂದು ಹೇಳಿದರು. ಇನ್ನು ಹಿರಿಯೂರಿನಲ್ಲಿ ಪೋಲಿಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಹಳೆಯ ಘಟನೆಗಳನ್ನು ನೆನಪಿಸಿದರು. ನಿಮ್ಮೆಲ್ಲರ ಆಶಿರ್ವಾದಿಂದ ಇಂದು ಕೃಷಿ ಸಚಿವನಾಗಿದ್ದೆನೆ ಎಂದರು. ಕಾರ್ಯಕ್ರಮದಲ್ಲಿ ಕುಂಟೆ ಹೊಡೆಯುವ ಮೂಲಕ ರೈತರ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಕೃಷಿ ಅಧಿಕಾರಿಗಳು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Edited By : Shivu K
PublicNext

PublicNext

11/09/2021 05:11 pm

Cinque Terre

94.58 K

Cinque Terre

0

ಸಂಬಂಧಿತ ಸುದ್ದಿ