ಚಿತ್ರದುರ್ಗ : ಕೃಷಿ ನಾಶ ಆದರೆ ದುರ್ಭಿಕ್ಷೇ ಬರುತ್ತದೆಂತ ಹೇಳುತ್ತಾರೆ "ಒಕ್ಕಲಿಗ ಉಕ್ಕಿದರೆ ಉಕ್ಕುವುದು ಜಗವಲ್ಲ, ಒಕ್ಕಲಿಗ ಹೊಕ್ಕದಿರೆ ಬಿತ್ತುವುದು ಜಗವೆಲ್ಲ ಎಂಬ ಸರ್ವಜ್ಞನ ನುಡಿ ಹೇಳುವ ಮೂಲಕ ನಾನು ಸರ್ವಜ್ಞ ನಾಡಿನಿಂದ ಬಂದವನು ಕೃಷಿ ಪ್ರಧಾನವಾದ ದೇಶದಲ್ಲಿ ಕೃಷಿ ಇಲ್ಲ ಎಂದರೆ, ಇವತ್ತು ಕೃಷಿಕ ಅವನ ಕಾಯಕತ್ವ ಮಾಡಲಿಲ್ಲ ಎಂದರೆ ಜಗತ್ತು ಅನ್ನವಿಲ್ಲದೆ ಉಪವಾಸವಿರಬೇಕಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ರೈತ ಸಂಪರ್ಕ ಕೇಂದ್ರ ಉದ್ಘಾಟನೆ ಕಾರ್ಯಕ್ರಮ ನೇರವೇರಿಸಿ ನಂತರ ಮಾತನಾಡಿದ ಸಚಿವರು ಇಂದು ಕೃಷಿಗೆ ಪ್ರಾಧಾನ್ಯತೆ ಇದೆ ಎಂದರು. ಐವತ್ತು ವರ್ಷಗಳ ಹಿಂದೆ ಹಿರಿಯೂರು ಪೋಲಿಸ್ ಅಧಿಕಾರಿಯಾಗಿದ್ದೆ. ಅಂದು ಎಳೆ ಮೀಸೆ ಇದ್ದಂತವನು ಇಂದು ಬಿಳಿ ಮೀಸೆಗೆ ಬಂದಿದ್ದೇನೆ ಎಂದು ನಗೆ ಚಟಾಕಿ ಹಾರಿಸಿದರು. ಯಾವುದೇ ಕಾರಣಕ್ಕೂ ರೈತರಾರು ಆತ್ಮಹತ್ಯೆ ಮಾಡಿಕೊಳ್ಳಬಾರದು. ನಮ್ಮ ಸರ್ಕಾರ ಸಂಪೂರ್ಣ ರೈತರ ಪರವಾಗಿದೆ, ರೈತರಾರು ಧೃತಿಗೆಡಬಾರದು ಎಂದು ರೈತರಿಗೆ ಧೈರ್ಯ ತುಂಬಿದರು. ನನಗೆ ಸಚಿವ ಸಂಪುಟದಲ್ಲಿ ಅರಣ್ಯ ಖಾತೆ ನೀಡಿದ್ದರು. ರೈತರಿಗೆ ಒಳ್ಳೆಯ ಕೃಷಿ ಯೋಜನೆಗಳನ್ನು ಜಾರಿಗೆ ತರಲು ಹಾಗೂ ರೈತರ ಕೃಷಿ ಸಮಸ್ಯೆಗಳನ್ನು ಬಗೆಹರಿಸಲು ಸಿಎಂ ಭೇಟಿಯಾಗಿ ಕೃಷಿ ಖಾತೆಯನ್ನು ಪಡೆದುಕೊಂಡಿದ್ದೇನೆ ಎಂದು ಸಚಿವರು ತಿಳಿಸಿದರು. ಕೃಷಿ ಬದಲಾವಣೆ ಬಗ್ಗೆ ಅಧ್ಯಯನ ಮಾಡಲು, ಈ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯಿಂದ ಪ್ರಾರಂಭಿಸಿ ಎಂಟು ಜಿಲ್ಲೆಗಳಲ್ಲಿ ಕೃಷಿ ಅಧ್ಯಯನ ಪೂರೈಸಿದ್ದೆನೆ ಎಂದರು. ಈ ಅಧ್ಯಾಯನದಲ್ಲಿ ಆಯಾ ಪ್ರದೇಶದ ಮಣ್ಣಿನ ಹೋಲಿಕೆ, ಬಿತ್ತನೆ, ರೈತರ ಸಂಕಷ್ಟಗಳ ಬಗ್ಗೆ ಸರ್ಕಾರ ಯಾವ ರೀತಿ ರೈತರಿಗೆ ಪರಿಹಾರ ರೂಪಿಸುವ ಬಗ್ಗೆ ಅಧ್ಯಯನ ಮಾಡಿದ್ದೇನೆ ಎಂದು ತಿಳಿಸಿದರು. ಹಿರಿಯೂರು ತಾಲ್ಲೂಕಿನ ರೈತರೊಂದಿಗೆ ಸಂಪೂರ್ಣ ಒಂದು ದಿನ ಇದ್ದು ರೈತರ ಸಮಸ್ಯೆಗಳೊಂದಿಗೆ ಚರ್ಚಿಸುತ್ತನೆ ಎಂದರು. ರೈತರಿಗೆ ಕೊಡುವ ಯಾವುದೇ ಯೋಜನೆಗಳನ್ನು ತಡೆ ಹಿಡಿಯದಂತೆ ಸಿಎಂ ಆರ್ಥಿಕ ಇಲಾಖೆಗೆ ತಿಳಿಸಿರುತ್ತಾರೆ. ರೈತರು ಕೃಷಿಗೆ ಅವಲಂಬಿತವಾಗದೆ ಸಾವಯವ ಕೃಷಿ, ವೈಜ್ಞಾನಿಕ ಕೃಷಿ, ಜೊತೆಗೆ ಉಪಕಸುಬುಗಳ ಕಡೆ ಗಮನ ಹರಿಸಬೇಕು. ಸಾವಯವ ಕೃಷಿಗೆ ಸರ್ಕಾರದಿಂದ ಈ ವರ್ಷದಲ್ಲಿ 500 ಕೋಟೆ ಮೀಸಲಿಟ್ಟಿದೆ. ಪಿಎಂ ಕಿಸಾನ್ ಯೋಜನೆಯಲ್ಲಿ ಚಿತ್ರದುರ್ಗಕ್ಕೆ 906 ಕೋಟೆ ಬಿಡುಗಡೆ ಮಾಡಲಾಗಿದೆ. ನೀರು ಇಲ್ಲದ ಕೋಲಾರದ ರೈತರು ಹೆಚ್ಚು ಮುಂದುವರಿದ್ದು, ಎಲ್ಲ ಸೌಲಭ್ಯ ಇರುವ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳು ಪ್ರಕರಣಗಳು ಕಂಡು ಬರುತ್ತವೆ ಎಂದರು. ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕೇಂದ್ರ ಸರ್ಕಾರ ಚಿತ್ರದುರ್ಗ ಜಿಲ್ಲೆಗೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ 1, 83 23 300 ಆಹಾರ ಕಿಟ್ ಗಳನ್ನು 23 ಸಾವಿರ ಕುಟುಂಬಗಳಿಗೆ ವಿತರಿಸಲಾಗಿದೆ. ರೈತರು ಸಮಗ್ರ ಕೃಷಿ ನೀತಿಯನ್ನು ಅಳವಡಿಸಿಕೊಳ್ಳಬೇಕು. ಲಭ್ಯವಿರುವ ನೀರನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗಾಯಿತ್ರಿ ಜಲಾಶಯಕ್ಕೆ ನೀರು : ಹಿರಿಯೂರಿನ ಶಾಸಕರು ಯಾವಾಗಲೂ ಕ್ಷೇತ್ರ ಹಾಗೂ ರೈತರ, ಹಿಂದುಳಿದ ವರ್ಗಗಳ ಅಭಿವೃದ್ಧಿ ಬಗ್ಗೆ ಯೋಚನೆ ಮಾಡ್ತಾ ಇರುತ್ತಾರೆ. ಹಿಂದೆ ನಾನು ಇಲ್ಲದ್ದಾಗ ವಿವಿ ಸಾಗರ ಜಲಾಶಯದಲ್ಲಿ 70 ಅಡಿ ದಾಟಿರಲಿಲ್ಲ. ಬಿಎಸ್ವೈ ಸಿಎಂ ಆದ್ಮೇಲೆ ಭದ್ರಾ ಮೇಲ್ದಂಡೆ ಯೋಜನೆಯಿಂದ ವಿವಿ ಸಾಗರ ಜಲಾಶಯಕ್ಕೆ ನೀರು ಹರಿಸಲಾಗಿದೆ. ಈ ಜೆಜಿ ಹಳ್ಳಿ ಹೋಬಳಿಯ ಜನರು ಹಾಗೂ ಶಾಸಕಿಯ ಕೋರಿಕೆಯ ಮೇರೆಗೆ ವಿವಿ ಸಾಗರದಿಂದ ಗಾಯಿತ್ರಿ ಜಲಾಶಯಕ್ಕೆ ನೀರು ಹರಿಸಲು ಶಾಸಕಿ ಜೊತೆಗೆ ಸಿಎಂ ಬಳಿ ತೆರಳಿ ನೀರು ಹರಿಸುವಂತೆ ಒತ್ತಡ ಹಾಕಲಾಗುವುದು ಎಂದು ಭರವಸೆ ನೀಡಿದರು. ಕೃಷಿ ಇಲಾಖೆಯಲ್ಲಿ ರೈತರಿಗೆ ಕಳಪೆ ಬೀಜ ವಿತರಣೆ ಎಂಬ ರೈತರ ಆರೋಪದ ಹಿನ್ನಲೆಯಲ್ಲಿ ನನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಇಂತಹ ಪ್ರಕರಣಗಳು ನನ್ನ ಗಮನಕ್ಕೆ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಕೈಗೊಂಡು ಬಂಧಿಸಲಾಗುವುದು ಎಂದರು.ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿದರು. ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
PublicNext
17/08/2021 04:07 pm