ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತರ ಪ್ರತಿಭಟನೆ : ಕೇಂದ್ರಕ್ಕೆ ಎಚ್ಚರಿಕೆ ಕೊಟ್ಟ ಮಿತ್ರಪಕ್ಷ

ಜೈಪುರ : ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಮಸೂದೆ ವಿರೋಧಿಸಿ ಅನ್ನದಾತರು ನಿರಂತರ ಪ್ರತಿಭಟನೆ ಮಾಡುತ್ತಿದ್ದರು ಸರ್ಕಾರ ಮಾತ್ರ ಕ್ಯಾರೆ ಎನ್ನುತ್ತಿಲ್ಲ.

ಸರ್ಕಾರದ ಈ ಧೋರಣೆಯನ್ನು ವಿರೋಧಿಸಿದ ಮಿತ್ರಪಕ್ಷಗಳು ಎನ್ ಡಿ ಎಯಿಂದ ಹೊರ ನಡೆಯುವ ಎಚ್ಚರಿಕೆ ನೀಡಿವೆ.

ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರಾಜಸ್ಥಾನದಲ್ಲಿ ಶನಿವಾರ ರೈತರು ಹಲವು ಹೆದ್ದಾರಿಗಳನ್ನು ತಡೆದು ಪ್ರತಿಭಟಿಸಿದ್ದಾರೆ.

ಬಿಜೆಪಿ ಮಿತ್ರ ಪಕ್ಷ ಲೋಕತಾಂತ್ರಿಕ್ ಪಕ್ಷದ (ಆರ್ ಎಲ್ ಪಿ) ಸಂಸದ ಹನುಮಾನ್ ಬೆನಿವಾಲ್ ಕೂಡ ಈ ಪ್ರತಿಭಟಯಲ್ಲಿ ಭಾಗವಹಿಸಿ ಅಚ್ಚರಿ ಮೂಡಿಸಿದ್ದಾರೆ.

ಹೊಸ ಕೃಷಿ ಕಾನೂನುಗಳನ್ನು "ರೈತ ವಿರೋಧಿ" ಎಂದು ಕರೆದಿರುವ ಆರ್ ಎಲ್ ಪಿಯ ಸಂಚಾಲಕ ಬೆನಿವಾಲ್, ಪ್ರಧಾನಿ ನರೇಂದ್ರ ಮೋದಿಯವರು ರೈತರ ಬಗ್ಗೆ ಕಾಳಜಿ ವಹಿಸಿದೆ ಆದರೆ, ಅವರು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.

ಮಾತುಕತೆಯಲ್ಲಿ ರೈತರ ಪರವಾದ ನಿರ್ಧಾರಗಳನ್ನು ಕೈಗೊಳ್ಳದೇ ಹೋದರೆ, ಎನ್ ಡಿಎಯಿಂದ ಹೊರ ಹೋಗುವುದಾಗಿಯೂ ಪುನರುಚ್ಚರಿಸಿದರು.

'ಮೂರು ಮಸೂದೆಗಳನ್ನು ರೂಪಿಸಿದಾಗ ಬಿಜೆಪಿ ಮಿತ್ರಪಕ್ಷಗಳು ಸೇರಿದ್ದಂತೆ ಯಾರೊಂದಿಗೂ ಸಮಾಲೋಚನೆ ನಡೆಸಿಲ್ಲ.

ನಾವೂ ಎನ್ ಡಿಎಯ ಭಾಗವಾಗಿದ್ದೇವೆ. ನಾವೂ ರೈತರ ಮಕ್ಕಳು. ಅವರು ನಮ್ಮೊಂದಿಗೆ ಮಾತನಾಡಬೇಕಿತ್ತು. ರೈತರಿಗೆ ಸಂಬಂಧಿಸಿದಂತೆ ಇಂಥದ್ದೊಂದು ಮಸೂದೆಯನ್ನು ರೂಪಿಸುತ್ತಿರುವುದಾಗಿ ಬಿಜೆಪಿ ನಮಗೆ ಹೇಳಬೇಕಾಗಿತ್ತು.

ಈ ಮಸೂದೆಗಳನ್ನು ರೂಪಿಸಿದ್ದು ಯಾರೆಂದು ಗೊತ್ತಿಲ್ಲ. ಮಸೂದೆಗಳನ್ನು ತಂದರು, ಅಂಗೀಕರಿಸಿದರು,'ಎಂದು ಬೆನಿವಾಲ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

Edited By : Nirmala Aralikatti
PublicNext

PublicNext

13/12/2020 10:39 am

Cinque Terre

95.51 K

Cinque Terre

5

ಸಂಬಂಧಿತ ಸುದ್ದಿ