ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ರಾನ್ಸ್ ಫಾರ್ಮರ್ ಸ್ಫೋಟ : ಮೃತಪಟ್ಟ ಅಪ್ಪ-ಮಗಳ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ

ಬೆಂಗಳೂರು: ಮನೆಯಲ್ಲಿ ಮದುವೆ ಎಂದು ಮಗಳೊಂದಿಗೆ ಬಟ್ಟೆ ಖರೀದಿಗೆ ಹೋದ ಅಪ್ಪ ಮಗಳ ಬಾಳು ಕಮರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 58 ವರ್ಷದ ಶಿವರಾಜು ಸ್ಥಳದಲ್ಲಿಯೇ ಮೃತರಾಗಿ, ಮಗಳು ಚೈತನ್ಯ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಸದ್ಯ ಟ್ರಾನ್ಸ್ ಫಾರ್ಮರ್ ಸ್ಫೋಟದಿಂದ ಮೃತಪಟ್ಟವರ ಕುಟುಂಬಕ್ಕೆ ಇಂಧನ ಸಚಿವ ವಿ.ಸುನೀಲ್ ಕುಮಾರ್ ತಲಾ 10 ಲಕ್ಷದಂತೆ 20 ಲಕ್ಷ ರೂ. ಪರಿಹಾರವನ್ನು ಫೋಷಿಸಿದ್ದಾರೆ.

ವಿಧಾನಸಭೆಯಲ್ಲಿ ಟ್ರಾನ್ಸ್ ಫಾರ್ಮರ್ ನಲ್ಲಿ ಲೀಡ್ ವಯರ್ ಸುಟ್ಟು ಆಯಿಲ್ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ. ಸಿಬ್ಬಂದಿ ಅದರ ಕಡೆ ಗಮನಹರಿಸದೆ ನಿರ್ಲಕ್ಷ್ಯ ಮಾಡಿದ್ದಾರೆ. ಪರಿಣಾಮ ಈ ದುರಂತ ನಡೆದಿದೆ. ಮುಂದೆ ಈ ರೀತಿಯ ತಪ್ಪುಗಳು ಆಗದಂತೆ ನಾವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟರು.

Edited By : Nirmala Aralikatti
PublicNext

PublicNext

24/03/2022 07:00 pm

Cinque Terre

72.74 K

Cinque Terre

3

ಸಂಬಂಧಿತ ಸುದ್ದಿ