ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

APMC ಕಾನೂನು ತಿದ್ದುಪಡಿ ವಿರುದ್ಧ ಹುಯಿಲು...ಕಾಂಗ್ರೆಸ್ ಬೂಟಾಟಿಕೆ ಬಯಲು

ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ

ಹೊಸದಿಲ್ಲಿ : ಕೇಂದ್ರದ ಕೃಷಿ ಕಾನೂನು ತಿದ್ದುಪಡಿಯನ್ನು ಬಲವಾಗಿ ವಿರೋಧಿಸುತ್ತಿರುವ ಕಾಂಗ್ರೆಸ್, 2019 ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ APMC ಕಾನೂನು ರದ್ದುಪಡಿಸುವುದಾಗಿ ಭರವಸೆ ನೀಡಿ ಈಗ ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡಿದೆ.

ಇದು ಕಾಂಗ್ರೆಸ್ಸಿನ ಬೂಟಾಟಿಕೆ ಹಾಗೂ ದ್ವಿಮುಖ ನೀತಿ. ಈಗ ಕೇಂದ್ರ ಸರಕಾರ ತಂದಿರುವ ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್‌ ನಾಯಕರು 2019 ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ APMC ಕಾನೂನು ರದ್ದುಪಡಿಸುವುದಾಗಿ ಭರವಸೆ ನೀಡಿದ್ದನ್ನು ಮರೆತಿದ್ದಾರೆ ಎಂದು ಕಾಂಗ್ರೆಸ್ಸಿನಿಂದ ಉಚ್ಛಾಟಿತಗೊಂಡ ಹಿರಿಯ ವಕ್ತಾರ ಸಂಜಯ್ ಝಾ ಟೀಕಿಸಿದ್ದಾರೆ

ಕಳೆದ ಲೋಕಸಭಾ ಚುನಾವಣೆಗೆ ನಮ್ಮ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ, ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸುವುದು ಮತ್ತು ಕೃಷಿ ಉತ್ಪನ್ನಗಳನ್ನು ನಿರ್ಬಂಧಗಳಿಂದ ಮುಕ್ತಗೊಳಿಸುವ ಪ್ರಸ್ತಾಪವನ್ನು ನಾವೇ ಮಾಡಿದ್ದೆವು. ಕೃಷಿ ಉತ್ಪನ್ನಗಳ ಮುಕ್ತ ವ್ಯಾಪಾರವನ್ನು ಕಾಂಗ್ರೆಸ್ ಬಯಸಿದೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ, ಮೋದಿ ಸರ್ಕಾರ ಪರಿಚಯಿಸಿದ ರೈತ ಪರ ಮಸೂದೆಗಳಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸ ಎಂದಿದ್ದಾರೆ ಝಾ.

ಈಗ ಬಿಜೆಪಿ ಸರಕಾರ ತಂದಿರುವ ಮಸೂದೆಯಲ್ಲಿ ಕನಿಷ್ಟ ಬೆಂಬಲ ಬೆಲೆ(MSP) ಕಡ್ಡಾಯ ಎಂಬುದಿಲ್ಲ. ಹೀಗಾಗಿ ಪರೋಕ್ಷವಾಗಿ ರದ್ದುಪಡಿಸುವ ತಂತ್ರವಿದೆ. ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಈ ವಿಷಯವನ್ನು ನಾವು ಪ್ರಸ್ತಾಪಿಸಿರಲಿಲ್ಲ, ಆದರೆ ಬೆಲೆ ಏರಿಕೆ ತಡೆಯುವ ರೈತರ ಪರವಾದ ಪರ್ಯಾಯ ಕಾನೂನು ತರುವ ಭರವಸೆ ನೀಡಲಾಗಿತ್ತು ಎಂದು ಕಾಂಗ್ರೆಸ್ ವಕ್ತಾರ ಜೈವೀರ್ ಶೇರ್ ಗಿಲ್ ಸಮರ್ಥಿಸಿಕೊಂಡಿದ್ದಾರೆ.

ಸಹಕಾರಿ ವ್ಯವಸ್ಥೆಯನ್ನು ಧ್ವಂಸಗೊಳಿಸುವುದೇ ಬಿಜೆಪಿ ದುರುದ್ದೇಶವಾಗಿದೆ. ಕೃಷಿ ಕ್ಷೇತ್ರ ಆಯಾ ರಾಜ್ಯಗಳ ವ್ಯಾಪ್ತಿಗೆ ಬರುತ್ತದೆ ಆದರೆ ಕೇಂದ್ರ ಸರಕಾರ ಈ ರೈತ ವಿರೋಧ ಕಾನೂನನ್ನು ತಂದು ರಾಜ್ಯ ಸರಕಾರಗಳ ಅಧಿಕಾರದ ಮೇಲೆ ಪ್ರಹಾರ ಮಾಡುತ್ತಿದೆ. ಈ ಕಾನೂನಿನ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ಸರಕಾರಗಳಿವೆ ಅವಕಾಶವನ್ನೇ ನೀಡಿಲ್ಲ ಎಂದೂ ಕಾಂಗ್ರೆಸ್ ಆರೋಪಿಸಿದೆ.

ಕಾಂಗ್ರೆಸ್ಸಿನ ಆರೋಪವನ್ನು ಅಲ್ಲಗೆಳೆದಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕನಿಷ್ಟ ಬೆಂಬಲ ಬೆಲೆ( MSP ) ವ್ಯವಸ್ಥೆ ರದ್ದಾಗದು, ಅದು ಎಂದಿನಂತೆ ಮುಂದುವರಿಯಲಿದೆ. ಅನಗತ್ಯವಾಗಿ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಈ ತಿದ್ದುಪಡಿಯು ಸಣ್ಣ ರೈತರನ್ನು ಕಾರ್ಪೊರೇಟ್ ಹಾಗೂ ದೊಡ್ಡ ರೈತರ ಕಪಿ ಮುಷ್ಠಿಯಿಂದ ಪಾರು ಮಾಡಲಿದೆ. ಆದ್ದರಿಂದ ರೈತ ಸಮುದಾಯ ಭಯಪಡುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ತಿದ್ದುಪಡಿ ಮಸೂದೆಗಳು ಕೃಷಿ ಕ್ಷೇತ್ರದ ವಿರೋಧಿಯಾಗಿದ್ದು ರೈತ ಸಮುದಾಯಕ್ಕೆಮರಣ ಶಾಸನವಾಗಿದೆ ಎಂದು ಕಟುವಾಗಿ ಟೀಕಿಸಿರುವ ಆಹಾರ ಸಂಸ್ಕರಣಾ ಖಾತೆ ಸಚಿವೆ ಹರಸಿಮ್ರತ್ ಕೌರ್ ಬಾದಲ್ (ಅಕಾಲಿ ದಳ) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಂತರ ಶಿವಸೇನಾ ಎನ್ ಡಿ ಎ ಮೈತ್ರಿಕೂಟದಿಂದ ಹೊರಬಂದಿತ್ತು. ಈಗ ಅಕಾಲಿ ದಳ ಮೈತ್ರಿ ಕಡಿದುಕೊಂಡ ಎರಡನೇ ಪಕ್ಷವಾಗಿದೆ. ಕಳೆದ 23 ವರ್ಷಗಳಿಂದ ಅಕಾಲಿದಳ ಬಿಜೆಪಿಯ್ನನ್ನು ಬೆಂಬಲಿಸುತ್ತ ಬಂದಿತ್ತು.

Edited By :
PublicNext

PublicNext

20/09/2020 10:46 am

Cinque Terre

145.23 K

Cinque Terre

5

ಸಂಬಂಧಿತ ಸುದ್ದಿ