ಹುಬ್ಬಳ್ಳಿ - ಖಾಸಗಿ ವಾಹಿನಿಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು, ಬೆಳ್ಳಂಬೆಳಿಗ್ಗೆ ಉಗ್ರರಂತೆ ಮಹಾರಾಷ್ಟ್ರ ಪೊಲೀಸರು ಅರೆಸ್ಟ್ ಮಾಡಿದ್ದು ಮೈತ್ರಿ ಸರಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು...
ನಗರದಲ್ಲಿಂದು ಮಾಧ್ಯಮದ ಮೂಲಕ ಮಾತನಾಡಿದ ಅವರು, ಇಂದು ಬೆಳ್ಳಿಗ್ಗೆ ಖಾಸಗಿ ವಾಹಿನಿಯ ಸಂಪಾದಕರನ್ನು ಸುಳ್ಳು ಆರೋಪದ ಮೇಲೆ ಬಂಧನ ಮಾಡಲಾಗಿತ್ತು.
ಇನ್ನು ಮೈತ್ರಿ ಸರಕಾರದ ತಪ್ಪುಗಳನ್ನು ಹಾಗೂ ಕಾಂಗ್ರೆಸ್ ಅಧ್ಯಕ್ಷ ಸೋನಿಯಾಗಾಂಧಿ ಸಮಾಜಕ್ಕೆ ಎತ್ತಿ ತೋರಿಸಿದ್ದಕ್ಕೆ ಈ ರೀತಿ ಮಾಡಿದ್ದು ಖಂಡನೀಯ, ಸಿಎಮ್ ಉದ್ಭವ ಠಾಕ್ರೆ ತಮ್ಮ ಸರಕಾರದ ತಪ್ಪುಗಳನ್ನು ಮುಚ್ಚಿ ಹಾಕಲಿಕ್ಕೆ ಬಂಧನ ಮಾಡುವ ಮೂಲಕ ಪತ್ರಿಕಾ ಸ್ವಾತಂತ್ರ್ಯವನ್ನು ದಮನ ಮಾಡಲು ಹೋರಟಿದ್ದಾರೆ. ಅಷ್ಟೇ ಅಲ್ಲದೇ ವಿನಾಕಾರಣ ವಾಹಿನಿಯ ಸ್ಟಾಪ್ ಗಳನ್ನು ಕರೆದು ತನಿಖೆ ಮಾಡುತ್ತಿರುವುದು ತಪ್ಪು.
ಮೈತ್ರಿ ಸರಕಾರದ ನಡೆ ನೋಡಿದರೆ ಮಾಧ್ಯಮದ ಧ್ವನಿಯನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಇದೆ ವಿಚಾರಕ್ಕೆ ಮಹಾರಾಷ್ಟ್ರದ ಸಿಎಮ್ ಉದ್ಭವ ಠಾಕ್ರೆ ಮುಂದಿನ ದಿನಗಳಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತೆ,ಎಂದು ಎಚ್ಚರಿಕೆ ನೀಡಿದರು
PublicNext
04/11/2020 06:02 pm