ವಾಷಿಂಗ್ಟನ್- ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ದಾಖಲೆ ಸಂಖ್ಯೆಯ ಮತದಾನವಾಗಿದೆ. ಸ್ಥಳೀಯ ಕಾಲಮಾನ ಸಂಜೆ 7ರ ವೇಳೆಗೆ ಮತದಾನ ಮುಕ್ತಾಯಗೊಂಡಿದೆ.
213 ಮತಗಳೊಂದಿಗೆ 23 ರಾಜ್ಯಗಳಲ್ಲಿ ಟ್ರಂಪ್ ಗೆ ಮುನ್ನಡೆಯಾಗಿದೆ. ಅದರಂತೆ 224 ಮತಗಳೊಂದಿಗೆ 18 ರಾಜ್ಯಗಳಲ್ಲಿ ಬೈಡನ್ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ನ್ಯೂ ಹ್ಯಾಂಪಶೈರ್ ನಲ್ಲಿ ಗೆಲುವು ಸಾಧಿಸಿದ್ದಾರೆ. ಒಹಿಯೋದಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಜಯಗಳಿಸಿದ್ದಾರೆ. ಇಬ್ಬರ ನಡೆವೆಯೂ ಸಮಾನ ಬಲಾಬಲದ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ ಫಲಿತಾಂಶ ಕುತೂಹಲ ಕೆರಳಿಸಿದೆ
PublicNext
04/11/2020 01:56 pm