ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕ ಅಧ್ಯಕ್ಷ ಸ್ಥಾನದ ಭವಿಷ್ಯ ನುಡಿದ ಪ್ರಾಣಿಗಳು!

ವಾಷಿಂಗ್ಟನ್- ಅಮೆರಿಕದಲ್ಲಿ ಈಗ ಚುನಾವಣೆ ಅಬ್ಬರ ಜಬರ್ದಸ್ತಾಗಿದೆ. ಈಗ ಅಲ್ಲಿ ಅಂತಿಮ ಹಂತದ ಮತದಾನ ನಡೆಯುತ್ತಿದೆ. ಈ ನಡುವೆ ಪ್ರಾಣಿಗಳು ಭವಿಷ್ಯ ಹೇಳಿರುವುದು ಕುತೂಹಲ ಮೂಡಿಸಿದೆ‌.

ರಷ್ಯಾದ ರೋಯೆವ್ ರುಚೆ ಮೃಗಾಲಯದ ಪ್ರಾಣಿಗಳು ಇಂತದ್ದೊಂದು ಭವಿಷ್ಯ ನುಡಿದಿವೆ. ಒಂದೇ ಅಳತೆಯ 2 ಕಲ್ಲಂಗಡಿ ಹಣ್ಣುಗಳ ಮೇಲೆ ಅಭ್ಯರ್ಥಿಗಳಾದ ಜೋ ಬೈಡೆನ್ ಹಾಗೂ ಡೊನಾಲ್ಡ್ ಟ್ರಂಪ್ ಭಾವ ಚಿತ್ರಗಳನ್ನು ಬಿಡಿಸಲಾಗಿತ್ತು. ಎರಡೂ ಕಲ್ಲಂಗಡಿಗಳನ್ನು ಬರ್ಟೆಕ್ ಎಂಬ ಹುಲಿಯ ಪಂಜರದ ಟೇಬಲ್ ಮೇಲೆ ಇಡಲಾಗಿತ್ತು‌. ಅಲ್ಲಿ ಬಂದ ಬರ್ಟೆಕ್ ಹುಲಿ ಬಿಡೆನ್ ಚಿತ್ರವಿದ್ದ ಹಣ್ಣನು ತಿಂದಿದೆ.

ಇದಾದ ಮೇಲೆ ಬಿಳಿ ಹುಲಿ ಕೂಡ ಬೈಡೆನ್ ಚಿತ್ರದ ಕಲ್ಲಂಗಡಿ ಹಣ್ಣಿಗೆ ತೂತು ಮಾಡಿದೆ. ಅಲ್ಲೇ ಇದ್ದ ಕರಡಿ ಮುಂದೆ ಕೂಡ ಹಣ್ಣು ಇಡಲಾಗಿತ್ತು‌. ಆ ಕರಡಿ ಕೂಡ ಜೋ ಬೈಡೆನ್ ಭಾವಚಿತ್ರ ಇದ್ದ ಕಲ್ಲಂಗಡಿ ಹಣ್ಣನ್ನೇ ತಿಂದಿದೆ.

ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಪ್ರಾಣಿಗಳು ಕೊಟ್ಟ ಫಲಿತಾಂಶ ನಿಜವಾಗಬಹುದಾ ಎಂಬ ಕುತೂಹಲ ಶುರುವಾಗಿದೆ

Edited By : Nagaraj Tulugeri
PublicNext

PublicNext

04/11/2020 12:06 pm

Cinque Terre

59.05 K

Cinque Terre

3

ಸಂಬಂಧಿತ ಸುದ್ದಿ