ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ ನಿತೀಶ್ ಕುಮಾರ್ ಮೇಲೆ ಈರುಳ್ಳಿ ಎಸೆದ ಯುವಕ: ಎಸೆಯಲಿ ಬಿಡಿ ಎಂದ ನಿತೀಶ್

ಪಾಟ್ನಾ- ಬಿಹಾರ ಸಿಎಂ ನಿತೀಶ್ ಕುಮಾರ್ ಮೇಲೆ ಯುವಕನೋರ್ವ ಈರುಳ್ಳಿ ಎಸೆದಿದ್ದಾನೆ‌. ಸಭೆಯೊಂದರಲ್ಲಿ ಇಂದು ಭಾಗವಹಿಸಿದ್ದ ನಿತೀಶ್ ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿದ್ದ ಯುವಕನೋರ್ವ ಏಕಾಏಕಿ ವೇದಿಕೆ ಮೇಲೆ ಈರುಳ್ಳಿ ಎಸೆಯಲಾರಂಭಿಸಿದ್ದಾನೆ.

ಪಾಟ್ನಾ ನಗರದ ಹರ್ಲಖಿಯ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಚುನಾವಣಾ ರ್ಯಾಲಿ ವೇಳೆ ಈ ಘಟನೆ ನಡೆದಿದೆ. ಈ ವೇಳೆ ನಿತೀಶ್ ಕುಮಾರ್ ಅವರ ಅಂಗರಕ್ಷಕ ಈರುಳ್ಳಿ ಎಸೆಯುತ್ತಿದ್ದ ವ್ಯಕ್ತಿಯನ್ನು ತಡೆಯಲು ಮುಂದಾದಾಗ ಆತ ಎಷ್ಟು ಈರುಳ್ಳಿ ಎಸೆಯುತ್ತಾನೋ ಎಸೆಯಲು ಬಿಡಿ ಎಂದಿದ್ದಾರೆ.‌

ಬಿಹಾರದಲ್ಲಿ ಮದ್ಯ ನಿಷೇಧವಾಗಿದೆ. ಆದರೂ ಅಕ್ರಮವಾಗಿ ಮದ್ಯ ಮಾರಾಟ ನಡೆದಿದೆ. ಈ ಬಗ್ಗೆ ನಿತೀಶ್ ಕುಮಾರ್ ಕ್ರಮ ಕೈಗೊಂಡಿಲ್ಲ ಎಂಬುದು ಈರುಳ್ಳಿ ಎಸೆದಾತನ ಆಕ್ರೋಶವಾಗಿತ್ತು.

Edited By : Nagaraj Tulugeri
PublicNext

PublicNext

03/11/2020 08:11 pm

Cinque Terre

71.5 K

Cinque Terre

1

ಸಂಬಂಧಿತ ಸುದ್ದಿ