ಬೆಂಗಳೂರು: ಜ್ಞಾನಭಾರತಿ ವಾರ್ಡ್ನ 304ನೇ ಮತಗಟ್ಟೆಯಲ್ಲಿ ಕುಟುಂಬ ಸಮೇತವಾಗಿ ಬಂದ ಆರ್.ಆರ್.ನಗರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ವೋಟಿಂಗ್ ಮಾಡಿದ್ದಾರೆ.
ತಂದೆ-ತಾಯಿ ಆಶೀರ್ವಾದ ಪಡೆದುಕೊಂಡರು ಮನೆಯಿಂದ ಬಂದ ಕುಸುಮಾ ನಂತರ ವಿಜಯನಗರದಲ್ಲಿರುವ ಆದಿ ಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಇತ್ತ ಶಿರಾ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರದ ಮತದಾನ ಮಾಡಿದ್ದಾರೆ.
ಮತದಾನಕ್ಕೂ ಮುನ್ನ ಹಾಲೇನಹಳ್ಳಿಯ ಆಂಜನೇಯಸ್ವಾಮಿ ದೇಗುಲ ಕಿರಂದಟ್ಟಿಯ ಕೋಟೆ ಮಾರಮ್ಮ ದೇಗುಲ ಹಾಗೂ ಶಿರಾದ ಆರ್.ಟಿ.ರಸ್ತೆಯಲ್ಲಿರುವ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ನಂತರ ಶಿರಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ನಿ ಜೊತೆ ಆಗಮಿಸಿ ಮತ ಚಲಾಯಿಸಿದ್ದಾರೆಂದು ತಿಳಿದುಬಂದಿದೆ.
PublicNext
03/11/2020 10:19 am