ಲಕ್ನೋ: ಬಿಜೆಪಿ ಜೊತೆ ಮೈತ್ರಿಗಿಂತ ರಾಜಕೀಯದಿಂದ ನಿವೃತ್ತಿಯೇ ಲೇಸು ಎಂದು ಬಹುಜನ ಸಮಾಜ ಪಕ್ಷ ಮುಖ್ಯಸ್ಥೆ, ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ ಹೇಳಿದ್ದಾರೆ.
ಮಾಯಾವತಿ ಅವರು ನಿನ್ನೆಯಷ್ಟೇ ಪ್ರಚಾರದ ವೇಳೆ, 'ಸಮಾಜವಾದಿ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವುದಕ್ಕಾಗಿ ಬಿಜೆಪಿಯನ್ನು ಬೆಂಬಲಿಸುತ್ತೇವೆ' ಎಂದು ಹೇಳಿದ್ದರು. ಆದರೆ ಈಗ ಯೂಟರ್ನ್ ಹೊಡೆದು ಬಿಜೆಪಿ ವಿರುದ್ಧ ಗುಡುಗಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ಬಿಜೆಪಿಯೊಂದಿಗೆ ಬಿಎಸ್‌ಪಿ ಮೈತ್ರಿ ಭವಿಷ್ಯದ ಯಾವುದೇ ಚುನಾವಣೆಗಳಲ್ಲಿ ಸಾಧ್ಯವಿಲ್ಲ. ಬಿಎಸ್‌ಪಿಯು ಕೋಮುವಾದಿ ಪಕ್ಷದೊಂದಿಗೆ ಸೇರುವುದಿಲ್ಲ. ನಮ್ಮ ಸಿದ್ಧಾಂತ ‘ಸರ್ವಜನ, ಸರ್ವಧರ್ಮ ಹಿತಾಯ’, ಇದು ಬಿಜೆಪಿಯ ಸಿದ್ಧಾಂತಕ್ಕೆ ವಿರುದ್ಧವಾಗಿದೆ' ಎಂದು ಹೇಳಿದ್ದಾರೆ.
PublicNext
02/11/2020 04:03 pm