ಹಾವೇರಿ- ಯಡಿಯೂರಪ್ಪ ಅವರನ್ನು ಇನ್ನೂ ಎರಡೂವರೆ ವರ್ಷ ಸಿಎಂ ಸ್ಥಾನದಿಂದ ಅಲ್ಲಾಡಿಸಲು ಯಾರಿಗೂ ಸಾಧ್ಯವಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯನ್ನು ಅವರ ನೇತೃತ್ವದಲ್ಲಿಯೇ ಎದುರಿಸಲಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಬಗ್ಗೆ ನಮ್ಮ ಪಕ್ಷದಲ್ಲೇ ಕೆಲವರು ಗೊಂದಲ ಸೃಷ್ಟಿಸಿದ್ದಾರೆ. ಈ ರೀತಿಯ ತಿರುಕನ ಕನಸು, ಹಗಲುಗನಸು ಕಾಣೋದನ್ನು ಬಿಡಬೇಕು. ಯಡಿಯೂರಪ್ಪ ಅವರ ನೇತೃತ್ವದಲ್ಲಿಯೇ ಮುಂದಿನ ಸ್ಥಳೀಯ ಚುನಾವಣೆಯಿಂದ ಎಲ್ಲ ಚುನಾವಣೆಗಳನ್ನು ಎದುರಿಸಲಿದ್ದೇವೆ ಎಂದು ಬಿ ಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
PublicNext
02/11/2020 01:35 pm