ಲಕ್ನೋ: ಯುವತಿಯರನ್ನು ಆಫೀಸ್‌ಗೆ ಕರೆಸಿ ಅವರೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನೊಬ್ಬನಿಗೆ ಇಬ್ಬರು ಯುವತಿರು ನಡು ರಸ್ತೆಯಲ್ಲೇ ಬೂಟಿ ಏಟು ಕೊಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಜಲಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನುಜ್ ಮಿಶ್ರಾ ಯುವತಿಯರಿಂದ ಹಲ್ಲೆಗೆ ಒಳಗಾದವನು. ಅನುಜ್ ಮಿಶ್ರಾ ಕೆಲವು ಯುತಿಯರಿಗೆ ಫೋನ್ ಮಾಡಿ ಆಫೀಸ್‌ಗೆ ಬರುವಂತೆ ಹೇಳುತ್ತಿದ್ದ. ಬಳಿಕ ಅವರೊಂದಿಗೆ ದೀರ್ಘಕಾಲ ಅಶ್ಲೀಲವಾಗಿ ಮಾತನಾಡುತ್ತಿದ್ದನು ಎಂಬ ಆರೋಪ ಕೇಳಿ ಬಂದಿದೆ.
ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ಕುಮಾರ್ ಲಲ್ಲು ಅವರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜವಾಗಿರಲಿಲ್ಲ. ಆದರೆ ಭಾನುವಾರವು ಅನುಜ್ ಮಿಶ್ರಾ ಅಶ್ಲೀಲವಾಗಿ ಮಾತನಾಡಿದ್ದರಿಂದ ಕೋಪಗೊಂಡ ಯುವತಿಯರು ಆತನ ಮೈ ಚಳಿಬಿಡಿಸಿದ್ದಾರೆ. ಒರೈ ಪೊಲೀಸ್ ಠಾಣೆ ಪ್ರದೇಶದಲ್ಲಿ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಂಬಂಧ ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ವರದಿಯಾಗಿದೆ.
PublicNext
01/11/2020 03:41 pm