ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತ್ತೆ ಕುಟುಕಿದ ಹಳ್ಳಿ ಹಕ್ಕಿ : ಸಿದ್ದರಾಮಯ್ಯ ಸೋತ ನಂತರ ಯಾವ ನಾಯಿಯಾಗಿದ್ದಾರೆ?

ಮೈಸೂರ : ಬೈ ಎಲೆಕ್ಷನ್ ಬಳಿಕ ಬಿಜೆಪಿ ಸೇರಿದ 17 ಜನರ ಸ್ಥಿತಿ ನಾಯಿ ಪಾಡಾಗುತ್ತೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಎಚ್. ವಿಶ್ವನಾಥ್ ತಿರುಗೇಟು ನೀಡಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ನಂತರ ಸಿದ್ದು ಯಾವ ನಾಯಿಯಾಗಿದ್ದಾರೆ ಅಂತಾ ಮೊದಲು ಹೇಳಿ? ಅವರು ಏನಾಗಿದ್ದಾರೆ ಅಂತಾ ಅರ್ಥ ಮಾಡಿಕೊಂಡು ಉಳಿದವರ ಬಗ್ಗೆ ಮಾತಾಡಲಿ ಎಂದು ಗುಡುಗಿದ್ದಾರೆ.

ಮೈಸೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಯಾವ ನಾಯಿಯಾಗಿದ್ದಾರೆ? ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು ಬಾದಾಮಿ ತನಕ ಓಡಿ ಹೋದವರು ಯಾರು ಎಂದು ಟೀಕಿಸಿದರು.

ಆರ್ ಆರ್ ನಗರ ಹಾಗೂ ಶಿರಾ ಕ್ಷೇತ್ರ ಎರಡರಲ್ಲೂ ನಾವು ಗೆಲ್ಲುತ್ತೇವೆ. ಎಂದರು.

Edited By : Nirmala Aralikatti
PublicNext

PublicNext

01/11/2020 12:36 pm

Cinque Terre

61.46 K

Cinque Terre

0

ಸಂಬಂಧಿತ ಸುದ್ದಿ