ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುಲ್ವಾಮ ವಿಚಾರದಲ್ಲಿ ರಾಜಕೀಯ ಮಾಡಿದವರ ಬಣ್ಣ ಬಯಲಾಗಿದೆ‌

ಕೆವಾಡಿಯಾ(ಗುಜರಾತ್): ಪುಲ್ವಾಮಾ ದಾಳಿ ವಿಚಾರದಲ್ಲಿ ರಾಜಕೀಯ ಮಾಡಿದವರಿಗೆ ಈಗ ತಕ್ಕ ಉತ್ತರ ಸಿಕ್ಕಿದೆ. ಆ ಘಟನೆಗೆ ಪಾಕಿಸ್ತಾನವೇ ಕಾರಣ ಎಂಬ ವಾಸ್ತವವನ್ನು ಅಲ್ಲಿನ ಸಂಸತ್ತಿನಲ್ಲೇ ಒಪ್ಪಿಕೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ‌‌.

ನಮ್ಮ‌ ಯೋಧರು ವೀರ ಹುತಾತ್ಮರಾದ ಸಂಧರ್ಭದಲ್ಲಿ ಇಡೀ ದೇಶ ಶೋಕಸಾಗರದಲ್ಲಿ ಮುಳುಗಿತ್ತು. ಇಂತಹ ಶೋಕಾಚರಣೆ ಸಂಧರ್ಭದಲ್ಲಿ ಕೆಲವರು ಕೊಳಕು ರಾಜಕೀಯ ಮಾಡಿದ್ದರು ಎಂದಿದ್ದಾರೆ.

ಏಕತಾ ದಿನದ ಅಂಗವಾಗಿ ಗುಜರಾತಿನ ಕೆವಾಡಿಯಾದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಈ ವಿಷಯ ಉಲ್ಲೇಖಿಸಿದ ಮೋದಿ ವಿರೋಧ ಪಕ್ಷಗಳ ನಡೆಯನ್ನು ವೀರೋಧಿಸಿದರು‌.

ಭಾರತಕ್ಕೆ ನಾವು ಅವರ ಮನೆಯಲ್ಲಿಯೇ ಹೊಡೆದಿದ್ದೇವೆ. ಪುಲ್ವಾಮಾ ಯಶಸ್ಸು ಇಮ್ರಾನ್ ಖಾನ್ ನೇತೃತ್ವದಲ್ಲಿ ದೇಶಕ್ಕೆ ಸಿಕ್ಕ ಯಶಸ್ಸಾಗಿದೆ ಎಂದು ಪಾಕಿಸ್ತಾನದ ವಿಜ್ಞಾನ-ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಅಲ್ಲಿನ ಸಂಸತ್ತಿನಲ್ಲಿ ಹೇಳಿದ್ದರು.

Edited By : Nagaraj Tulugeri
PublicNext

PublicNext

31/10/2020 02:09 pm

Cinque Terre

67.57 K

Cinque Terre

5