ವಡೋದರ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸರ್ದಾರ್ ಪಟೇಲ್‌ರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಗುಜರಾತ್‌ನ ಕೆವಾಡಿಯಾದಲ್ಲಿರುವ ಬೃಹತ್ ಏಕತಾ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಕೇಂದ್ರ ಸಶಸ್ತ್ರ ಪಡೆ ಮತ್ತು ಗುಜರಾತ್ ಪೊಲೀಸ್ ಪರೇಡ್ ವೀಕ್ಷಿಸಿದರು. ಪ್ರಧಾನಿ ಮೋದಿ ಗುಜರಾತ್ ಪ್ರವಾಸದಲ್ಲಿದ್ದು, ಶುಕ್ರವಾರ ಅಹಮದಾಬಾದ್‌ಗೆ ಆಗಮಿಸಿದ್ದರು. ಕೆವಾಡಿಯಾದಲ್ಲಿ ಆರೋಗ್ಯ ವನ, ಏಕತಾ ಮಾಲ್, ಮಕ್ಕಳ ಪೌಷ್ಟಿಕ ಪಾರ್ಕ್, ಸರ್ದಾರ್ ಪಟೇಲ್ ಜಂಗಲ್ ಸಫಾರಿಯನ್ನು ಶುಕ್ರವಾರ ಉದ್ಘಾಟಿಸಿದ್ದರು.
PublicNext
31/10/2020 11:20 am