ಪಾಕಿಸ್ತಾನದ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಪರ ಘೋಷಣೆ ಕೂಗಲಾಯ್ತು ಎಂಬ ಸುದ್ದಿ ಎಲ್ಲೇಡೆ ಹರದಾಡುತ್ತಿದ್ದು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಸದಸ್ಯರು, ಮೋದಿ ಪರ ಘೋಷಣೆ ಕೂಗಿದರು ಎಂದು ಹಲವಾರು ಸುದ್ದಿ ಸಂಸ್ಥೆಗಳು ಟ್ವಿಟ್ಟರ್ ಬಳಕೆದಾರರು ಹೇಳಿದ್ದಾರೆ.
ಈ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿ ಪಾಕ್ ಸಂಸತ್ತನಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅಲ್ಲಿನ ವಿರೋಧ ಪಕ್ಷಗಳು ಮೋದಿ ಮೋದಿ ಎಂದು ಘೋಷಣೆ ಕೂಗಿದರು ಎಂದಿದ್ದು ಶೋಭಾ ಕರಂದ್ಲಾಜೆ ಅವರು ಟ್ವೀಟ್ ಮಾಡಿರುವ ಈ ವಿಡಿಯೋದಲ್ಲಿ ಪಾಕ್ ವಿದೇಶಾಂಗ ಸಚಿವರ ಭಾಷಣಕ್ಕೆ ವಿರೋಧ ಪಕ್ಷಗಳು ಅಡ್ಡಿ ಮಾಡುವ ದೃಶ್ಯ ಸ್ಪಷ್ಟವಾಗಿ ಕಂಡಿದೆ.
ಪಾಕ್ ವಿದೇಶಾಂಗ ಸಚಿವರು ಫ್ರಾನ್ಸ್ ದೇಶದಲ್ಲಿ ವಿವಾದಕ್ಕೆ ಕಾರಣವಾದ ಪ್ರವಾದಿ ಮೊಹಮ್ಮದರ ಕಾರ್ಟೂನ್ ಹಾಗೂ ಎಫ್ಎಟಿಎಫ್ನಲ್ಲಿ ಪಾಕಿಸ್ತಾನ ಈಗಲೂ ಬೂದು ಬಣ್ಣದ ಪಟ್ಟಿಯಲ್ಲೇ ಇರುವ ಕುರಿತು ಮಾತನಾಡುತ್ತಿದ್ದರು. ಆದ್ರೆ ಅವರ ಭಾಷಣಕ್ಕೆ ಇತರರು ಅಡ್ಡಿಪಡಿಸುವ ಈ ರೀತಿ ಇದಾಗಿತ್ತು ಎಂಬುದು ತಿಳಿದಿದೆ.
ಈ ವಿಡಿಯೋ ಬಳಸಿ ಇಂಡಿಯಾ ಟಿವಿ ದೃಶ್ಯದ ತುಣುಕನ್ನು ಟ್ವೀಟ್ ಮಾಡಿರುವ ಆಂಕರ್ ದೀಪಕ್ ಚೌರಾಸಿಯಾ ಅವರು ಶೀಘ್ರದಲ್ಲೇ ಕರಾಚಿ ಹಾಗೂ ಲಾಹೋರ್ ಭಾರತದ ಭಾಗವಾಗುತ್ತದೆ ಎಂದಿದ್ದಾರೆ.
ಈ ಸಂಬಂಧ ಸೂಕ್ತ ದಾಖಲೆ ಸಂಗ್ರಹಿಸಿದಾಗ ಶಾ ಮೆಹಮೂದ್ ಖುರೇಷಿ ಅವರ ಭಾಷಣ ಇರುವ ದೃಶ್ಯ ಸಿಕ್ಕಿದ್ದು ಅಕ್ಟೋಬರ್ 26, 2020ರಂದು ಅವರ ಭಾಷಣ ವೇಳೆ ಪಾಕಿಸ್ತಾನದ ದುನಿಯಾ ನ್ಯೂಸ್ ತನ್ನ ಅಧಿಕೃತ ಯೂಟ್ಯೂಬ್ ಅಕೌಂಟ್ ಒಳಗೆ ಈ ವಿಡಿಯೋ ಪೋಸ್ಟ್ ಮಾಡಿದೆ.
ವಿರೋಧ ಪಕ್ಷಗಳು ವೋಟಿಂಗ್, ವೋಟಿಂಗ್ ಎಂದು ಕೂಗೋದು ಸ್ಪಷ್ಟವಾಗಿ ಕೇಳುತ್ತದೆ. ಈ ವೇಳೆ ಸಿಟ್ಟಾಗುವ ಖುರೇಷಿ ಅವರು, ಮೋದಿ ಅವರ ರೀತಿ ವಿರೋಧ ಪಕ್ಷಗಳು ಆಡುತ್ತಿವೆ ಎನ್ನುವುದೇ ಮೋದಿ ಮೋದಿ ಎಂಬ ಕೂಗಾಗಿದೆ ಎನ್ನುತ್ತಿದ್ದಾರೆ.
ಪಾಕಿಸ್ತಾನದ ವಿರೋಧ ಪಕ್ಷದ ನಾಯಕ ಕ್ವಾಜಾ ಆಸಿಫ್ ಅವರು ಶಾ ಮೆಹಮೂದ್ ಖುರೇಷಿ ಅವರ ಭಾಷಣಕ್ಕೆ ಮುನ್ನ ಸದನದಲ್ಲಿ ಮತದಾನ ನಡೆಯಬೇಕೆಂದು ಆಗ್ರಹಿಸುತ್ತಿದ್ದಾರೆ ಇದೇ ವಿಚಾರವಾಗಿ ಘೋಷಣೆ ಕೂಗಲಾಯ್ತು ಎಂದು ಆ ಸಂದರ್ಭವನ್ನು ವಿವರಿಸಿದ್ದಾರೆ. ಪಾಕಿಸ್ತಾನದ ಡಾನ್ ವೆಬ್ ಸೈಟ್ ಈ ಕುರಿತ ಸಮಗ್ರ ಮಾಹಿತಿ ನೀಡಿದೆ ಪಾಕ್ ಸಂಸತ್ನಲ್ಲಿ ವೋಟಿಂಗ್'ಗಾಗಿ ಘೋಷಣೆ ಕೂಗಲಾಯ್ತು ಎಂದಿದೆ.
ಟೈಮ್ಸ್ ಫ್ಯಾಕ್ಟ್ನ ಸಮಗ್ರ ಅಧ್ಯಯನದ ಬಳಿಕ ಹೇಳೋದಾದ್ರೆ ಪಾಕ್ ಸಂಸತ್ನಲ್ಲಿ ವೋಟಿಂಗ್, ವೋಟಿಂಗ್ ಎಂದು ಘೋಷಣೆ ಹಾಕಿದ ವಿಡಿಯೋವನ್ನು ಮೋದಿ ಮೋದಿ ಎಂದು ಘೋಷಣೆ ಹಾಕಲಾಯ್ತು ಎಂದು ತಿರುಚಲಾಗಿದೆ.
PublicNext
30/10/2020 02:45 pm