ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಸುಮಾ ಕಣ್ಣೀರಿಗೂ ಮುನಿರತ್ನ ಕಣ್ಣೀರಿಗೂ ವ್ಯತ್ಯಾಸ ಇದೆ

ಬೆಂಗಳೂರು- ಆರ್ ಆರ್ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ತಮ್ಮ ಜೀವನದಲ್ಲಿ ಬಂದ ಅನೇಕ ನೋವುಗಳನ್ನು ನೆನೆದುಕೊಂಡು ಅತ್ತಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಇಂತಹ ಸ್ಥಿತಿ ತಂದುಕೊಂಡೆನಲ್ಲಾ ಎಂದು ಮರುಕಪಟ್ಟು ಅತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಆರ್ ಆರ್ ನಗರದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಂಡ ನಂತರ ಮಾತನಾಡಿದ ಅವರು ಕಾಂಗ್ರೆಸ್ಸನ್ನು ನನ್ನ ತಾಯಿ ಹಾಗೂ ನನ್ನ ರಕ್ತ ಎಂದುಕೊಂಡಿದ್ದ ನಾನು ಈಗ ಬಿಜೆಪಿಗೆ ಬಂದು ಮತ ಕೇಳುವಂತಾಯ್ತಲ್ಲ ಎಂದು ಮುನಿರತ್ನ ಮರುಕಪಟ್ಟು ಕಣ್ಣೀರಿಡುತ್ತಿದ್ದಾರೆ ಎಂದು ಮಾತಲ್ಲೇ ತಿವಿದರು.

ಹಿಂದೊಮ್ಮೆ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಸ್ವತಃ ಮುನಿರತ್ನ ಅವರೇ ಹೇಳಿದ್ದರು. ಈಗ ಡಿಕೆ ಶಿವಕುಮಾರ್ ಹಿಂದೆ ಯಾರೂ ಇಲ್ಲ ಎನ್ನುತ್ತಿದ್ದಾರೆ. ಆಗ ಆ ತರ ಈಗ ಈ ತರ ನಟಿಸೋದ್ರಲ್ಲಿ ಮುನಿರತ್ನ ಪರಿಣತರು. ಸುಮ್ನೆ ಈಗ ಕಣ್ಣೀರು ಹಾಕಿ ಏನೂ ಪ್ರಯೋಜನ ಇಲ್ಲ ಎಂದು ಶಿವಕುಮಾರ್ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

29/10/2020 06:28 pm

Cinque Terre

54.81 K

Cinque Terre

6

ಸಂಬಂಧಿತ ಸುದ್ದಿ