ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಕಾಶ್ ಹುಕ್ಕೇರಿಗೆ ಗಾಂಭೀರ್ಯತೆ ಇಲ್ಲ-ಸತೀಶ್ ಜಾರಕಿಹೊಳಿ

ಬೆಳಗಾವಿ. ಪ್ರಕಾಶ್ ಹುಕ್ಕೇರಿ ಅವರಿಗೆ ರಾಜಕೀಯ ಗಾಂಭೀರ್ಯತೆ ಇಲ್ಲ. ನಮ್ಮ ಪಕ್ಷಕ್ಕಿಂತ ಅವರಿಗೆ ಬಿಜೆಪಿ ಮೇಲೆ ಮೋಹ ಇದ್ದಂತೆ ಕಾಣುತ್ತೆ. ಬೇಕಿದ್ದರೆ ಅವರು ಬಿಜೆಪಿಗೆ ಹೋಗಲು ಮುಕ್ತ ಅವಕಾಶವಿದೆ‌. ಈ ಕಾರಣಕ್ಕಾಗಿ ಇನ್ನೊಬ್ಬರನ್ನು ಆರೋಪಿಸುವುದು ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ‌.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಕಾಶ್ ಹುಕ್ಕೇರಿ ಅವರು ಕಾಂಗ್ರೆಸ್‌ ನಲ್ಲಿ ಇದ್ದರೂ ಒಳ್ಳೆಯದು. ಇರದಿದ್ದರೂ ಒಳ್ಳೆಯದು‌. ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸೋದಾಗಿ ಹೇಳಿಕೆ ನೀಡಿರುವ ಅವರು ತಮ್ಮ ವ್ಯಕ್ತಿತ್ವ ಎಂತದ್ದು ಎಂಬುದನ್ನು ತೋರಿಸಿದ್ದಾರೆ. ಇದೆಲ್ಲವನ್ನೂ ಹೈಕಮಾಂಡ್ ಗಮನಿಸುತ್ತಿರುತ್ತದೆ‌. ಅವರು ಸದ್ಯ ಅಧಿಕಾರದಲ್ಲಿಲ್ಲ. ಹೀಗಾಗಿ ಹತಾಶರಾಗಿ ಹೀಗೆ ಮಾತಾಡ್ತಿದ್ದಾರೆ. ಇದು ನಮಗೆ ಅಚ್ಚರಿ ತರಿಸಿದೆ. 30 ವರ್ಷ ಕಾಂಗ್ರೆಸ್ ಪಕ್ಷದಲ್ಲಿದ್ದು ಈಗ ಹೀಗೆ ಮಾತಾಡೋದನ್ನ ನೋಡಿದ್ರೆ ಪ್ರಕಾಶ್ ಹುಕ್ಕೇರಿ ಅವರು ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರಬಹುದು ಎನಿಸುತ್ತಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

Edited By : Nagaraj Tulugeri
PublicNext

PublicNext

27/10/2020 07:49 pm

Cinque Terre

70.93 K

Cinque Terre

3

ಸಂಬಂಧಿತ ಸುದ್ದಿ