ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಿ ಬಿ ಜಯಚಂದ್ರ ಮುದಿ ಎತ್ತು-ಬಿ ಜೆ ಪುಟ್ಟಸ್ವಾಮಿ

ತುಮಕೂರು- ಶಿರಾ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಟಿ ಬಿ ಜಯಚಂದ್ರ ಮುದಿ ಎತ್ತು‌ ಬಿಜೆಪಿ ಅಭ್ಯರ್ಥಿ ಯುವ ಎತ್ತು ಎಂದು ರಾಜ್ಯ ಯೋಜನಾ ಪ್ರಾಧಿಕಾರದ ಉಪಾಧ್ಯಕ್ಷ ಬಿ ಜೆ ಪುಟ್ಟಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮತದಾರರು‌ ಯುವ ಎತ್ತಿಗೆ ಮತ ಹಾಕಬೇಕು‌. ಹಾಕಿದ್ರೆ ಉತ್ತಮ ಕೆಲಸ ಕಾರ್ಯಗಳು ನಡೆಯುತ್ತವೆ‌. ಮುದಿ ಎತ್ತಿಗೆ ಮತ ಹಾಕಿ ಗೆಲ್ಲಿಸಿದ್ರೆ ಅವರಿಂದ ಯಾವ ಕೆಲಸ ಸಾಧ್ಯ? ಎಂದು ಪ್ರಶ್ನೆ ಮಾಡಿದರು‌.

ಸಮ್ಮಿಶ್ರ ಸರ್ಕಾರ ಬಿದ್ದು ವರ್ಷ ಕಳೆದಿದೆ. ಆದ್ರೂ ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ಭಿನ್ನಮತ ಇನ್ನೂ ಶಮನವಾಗಿಲ್ಲ‌. ಇವರಿಬ್ಬರ ವೈಯಕ್ತಿಕ ದ್ವೇಷಕ್ಕಾಗಿಯೇ ಹಿಂದಿನ ಮೈತ್ರಿ ಸರ್ಕಾರ ಮುರಿದು ಬಿತ್ತು. ಈ ಎರಡೂ ಪಕ್ಷಗಳ ಬಳಿ ಅಭಿವೃದ್ಧಿ ಮಂತ್ರವೇ ಇಲ್ಲ. ಸುಮ್ಮನೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ ಎಂದು ಬಿ ಜೆ ಪುಟ್ಟಸ್ವಾಮಿ ಟೀಕಿಸಿದರು.

Edited By : Nagaraj Tulugeri
PublicNext

PublicNext

27/10/2020 03:13 pm

Cinque Terre

46.47 K

Cinque Terre

4

ಸಂಬಂಧಿತ ಸುದ್ದಿ