ಪಬ್ಲಿಕ್ ನೆಕ್ಸ್ಟ್ ವಿಶೇಷ
ಕೆಲವು ರಾಜಕಾರಣಿಗಳಿಗೆ ಹಾಗೂ ಪಕ್ಷಗಳಿಗೆ ಹಿಂದೂ ಸಮಾಜವನ್ನು ಹೀಗಳಿಯುವುದು, ಹಿಂದೂ ಹಬ್ಬ ಹರಿದಿನ, ಆಚರಣೆಗಳನ್ನು ಅವಮಾನಿಸುವುದೆಂದರೆ ಎಲ್ಲಿಲ್ಲದ ಉಮೇದು. ಸೆಕ್ಯುಲರ್ ಮುಖವಾಡದಲ್ಲಿ ಹಿಂದೂಗಳ ವಿರುದ್ಧ ಇವರು ಆಡಿದ್ದೇ ಆಟ.
ಅದರಲ್ಲೂ ಕಾಂಗ್ರೆಸ್ಸಿನವರಿಗಂತೂ ಹಿಂದೂಗಳನ್ನು ಅವಮಾನಿಸದಿದ್ದರೆ ನಿದ್ದೆಯೇ ಬರುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಜಯನಗರದ ಕಾಂಗ್ರೆಸ್ಸಿನ ಶಾಸಕಿ ಸೌಮ್ಯ ರೆಡ್ಡಿ ಮೊನ್ನೆ ಮಾಡಿದ ವಿವಾದಾತ್ಮಕ ಪೂಜೆ.
ಅವರ ಸೆಕ್ಯುಲರ್ ಪೂಜೆ ಹಿಂದೂಗಳಿಗೆ ಮಾತ್ರವಲ್ಲ ಮುಸ್ಲಿಂ ಹಾಗೂ ಕ್ರಿಶ್ಚನ್ ಸಮುದಾಯವನ್ನು ಘಾಸಿಗೊಳಿಸಿದೆ.
ಏಕೆಂದರೆ ಮುಸ್ಲಿಂ ಧರ್ಮದಲ್ಲಿ ಮೂರ್ತಿ ಪೂಜೆ ನಿಷಿದ್ಧ. ಕ್ರಿಶ್ಚಿಯನ್ ಧರ್ಮದಲ್ಲೂ ಇದಕ್ಕೆ ಅವಕಾಶವಿಲ್ಲ. ಕುರಾನ್ ಹಾಗೂ ಬೈಬಲ್‌ನಲ್ಲಿ ಎಲ್ಲಿಯೂ ಸಹ ನವರಾತ್ರಿ ಆಚರಣೆ ಉಲ್ಲೇಖವಿಲ್ಲ. ಹೀಗಿರುವಾಗ ಸೌಮ್ಯ ರೆಡ್ಡಿ ಅವರು ಈ ರೀತಿ ಪೂಜೆ ಮಾಡಿ ಮೂರೂ ಧರ್ಮೀಯರ ಮನನೋಯಿಸಿದ್ದಾರೆ.
ದೇಶದಾದ್ಯಂತ ಅಸಂಖ್ಯಾತ ಹಿಂದೂಗಳು ನವರಾತ್ರಿಯೆಂದರೆ ಕೇವಲ ಹಿಂದೂಗಳಿಗಷ್ಟೇ ಸೀಮಿತವಾದ ಹಬ್ಬ.
ಒಂದೇ ಫೋಟೋದಲ್ಲಿ ಗಣೇಶ, ಏಸು ಕ್ರಿಸ್ತ ಹಾಗೂ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುವ ಚಿತ್ರಗಳಿದ್ದವು. ಜೊತೆಗೆ ಆ ಫೋಟೋವಿನ ಮುಂದೆ ಭಾರತದ
ಸಂವಿಧಾನದ ಪುಸ್ತಕವನ್ನಿಟ್ಟು ಪೂಜೆ ಮಾಡಿದ್ದರು.
ಭಾರತದ ಸಂವಿದಾನ ಎಲ್ಲರಿಗೂ ಪೂಜನೀಯ ಹಾಗೂ ಅದನ್ನು ಪೂಜೆ ಮಾಡುವುದು ಸರಿ. ಆದರೆ ಹಿಂದೂಗಳ ಹಬ್ಬದಂದು ಏಸು ಕ್ರಿಸ್ತ ಹಾಗೂ ಅಹುವಿನ ಚಿತ್ರಕ್ಕೆ ಪೂಜೆ ಮಾಡಿದ್ದು ಹಿಂದೂ ಧರ್ಮಕ್ಕೆ ಮಾಡಿದ ಬಹುದೊಡ್ಡ ಅವಮಾನವಂತೂ ಸರಿಯೇ ಸರಿ. ಅದರೊಂದಿಗೆ ಮುಸ್ಲಿಂ ಹಾಗೂ ಕ್ರಿಸ್ತ್ ಸಮುದಾಯಕ್ಕೆ ನೋವುಂಟು ಮಾಡಿದ್ದಾರೆಂಬುದು ವಿಷಾದನೀಯ.
ಭಂಡತನ ಮೊಂಡತನಕ್ಕೆ ಹೆಸರಾಗಿರುವ ಈ ಕಾಂಗ್ರೆಸ್ಸಿಗರು , ತಾವು ಮಾಡಿದ ತಪ್ಪಿಗೆ ಕ್ಷಮೆಯನ್ನು ಕೇಳಬೇಕಿತ್ತು. ಆದರೆ ತಾವು ಮಾಡಿದನ್ನು ಸರಿಯೆಂದು ಮತ್ತೊಮ್ಮೆ ಹೇಳಿಕೊಳ್ಳುವ ಮೂಲಕ ಮೊಂಡುತನ ಪ್ರದರ್ಶಿಸಿದ್ದಾರೆ.
ಇತ್ತ ಕನಕಪುರದಲ್ಲಿ ಡಿ.ಕೆ. ಶಿವಕುಮಾರ್ ಮುನೇಶ್ವರ ಬೆಟ್ಟವನ್ನು ಏಸು ಬೆಟ್ಟವನ್ನಾಗಿ ಮಾಡಲು ತಯಾರಾಗಿದ್ದರು. ಈಗ ಸೌಮ್ಯ ರೆಡ್ಡಿ ಸೌಮ್ಯವಾಗಿಯೇ ಮತ್ತೊಂದು ಹೆಜ್ಜೆ ಮುಂದಿಟ್ಟು ಆ ಪರಂಪರೆಯನ್ನು ಮುಂದುವರಿಸಿದ್ದಾರೆ.
ಜಾತ್ಯತೀತವೆಂದರೆ ಹಿಂದೂ ಹಬ್ಬಗಳಂದು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ದೇವರನ್ನು ಪೂಜಿಸುವುದೇ? ನಿಮಗೆ ಧೈರ್ಯವಿದ್ದರೆ ಬಕ್ರೀದ್ ಹಬ್ಬದಂದು ಇದೇ ಚಿತ್ರಕ್ಕೆ ಪೂಜೆ ಮಾಡಿ ಮುಸಲ್ಮಾನ್ ಬಂಧುಗಳಿಗೆ ಶುಭಾಶಯವನ್ನು ಕೋರಿ ನೋಡೋಣ? ಕ್ರಿಸ್ ಮಸ್ ಹಬ್ಬದಂದು ಗಣೇಶನ ಪೂಜೆಯನ್ನು ಮಾಡಿ ನೋಡೋಣ? ಟ್ವಿಟರಿಗರೂ ಝಾಡಿಸಿದ್ದಾರೆ.
ಮೂರು ಧರ್ಮದ ದೇವರನ್ನಿಟ್ಟು ಪೂಜೆ ಮಾಡುವ ನಿಮಗೆ, ಕಳೆದ ವರ್ಷ ರಾಮ ಮಂದಿರದ ತೀರ್ಪು ಬಂದಾಗ ಜಾತ್ಯತೀತತೆಯ ನೆನಪಾಗಲಿಲ್ಲವೇ? ಅಸಂಖ್ಯಾತ ಹಿಂದೂಗಳ ಆರಾಧ್ಯ ದೈವ ಶ್ರೀ ರಾಮಚಂದ್ರನ ಮಂದಿರದ ಪರವಾಗಿ ತೀರ್ಪು ಬಂದಾಗ, ಬಹಿರಂಗವಾಗಿ ತಾವು ತಮ್ಮ ಕಚೇರಿಯಲ್ಲಿ ಯಾಕೆ ಶ್ರೀರಾಮನ ಪೂಜೆ ಮಾಡಲಿಲ್ಲ? ತಮ್ಮ ಕಚೇರಿಯ ಮೇಲೆ ಯಾಕೆ ಶ್ರೀರಾಮನ ಧ್ವಜವನ್ನು ಹಾರಿಸಲಿಲ್ಲ? ಐನೂರು ವರ್ಷಗಳ ಕಾಲ ತಾಳ್ಮೆಯಿಂದ ಕೋರ್ಟಿನ ತೀರ್ಪಿಗಾಗಿ ಕಾದಿದ್ದ ಹಿಂದೂಗಳಪರವಾಗಿ ಅದೆಷ್ಟು ಮಾತನಾಡಿದ್ದೀರಿ ? ಎಂದೂ ಪ್ರಶ್ನಿಸಿದ್ದಾರೆ.
ನಿಮ್ಮದೇ ಪಕ್ಷದವರು ಶ್ರೀರಾಮನ ಇರುವಿಕೆಯನ್ನೇ ಪ್ರಶ್ನಿಸಿ ಕೋರ್ಟಿನಲ್ಲಿ ಅರ್ಜಿ ಹಾಕಿದ್ದರು, ಆಗ ನಿಮಗೆ ಜಾತ್ಯತೀತತೆಯ ನೆನಪಾಗಲಿಲ್ಲವೇ?
ಇತ್ತೀಚಿಗೆ ತನಿಷ್ಕ್ ಕಂಪನಿಯ ಜಾಹೀರಾತಿನಲ್ಲಿ ಲವ್ ಜಿಹಾದ್ ಅನ್ನು ಅಷ್ಟು ಬಹಿರಂಗವಾಗಿ ಪ್ರಚಾರ ಮಾಡಿದರೂ ತುಟಿಕ್ ಪಿಟಕ್ ಎನ್ನದ ನಿಮಗೆ ಜಾತ್ಯತೀತತೆಯ ಬಗ್ಗೆ ಮಾತನಾಡುವ ಯಾವ ಹಕ್ಕಿದೆ?
ಆಯುಧಪೂಜೆಯ ಜಾತ್ಯತೀತತೆಯನ್ನು ಕ್ರಿಸ್ ಮಸ್ ಹಾಗೂ ಬಕ್ರೀದ್ ಹಬ್ಬದಲ್ಲಿ ನೋಡಲು ರಾಜ್ಯದ ಜನತೆ ಕಾಯುತ್ತಿದ್ದಾರೆ. ಅಂದೂ ಇದೇ ರೀತಿ ಮೂರೂ ಧರ್ಮಗಳ ಪೋಟೊಕ್ಕೆ ಆರತಿ ಬೆಳಗಿದ ಫೊಟೊ ಟ್ವೀಟ್ ಮಾಡಿಕೊಳ್ಳಲು ಮರೆಯಬೇಡಿ ಎಂದು ಹಿಂದೂ ಅಭಿಮಾನಿಗಳು ಸಲಹೆ ನೀಡಿದ್ದಾರೆ.
PublicNext
27/10/2020 10:16 am