ಬೆಂಗಳೂರು: ರಾಜ್ಯದಲ್ಲಿ ಮಹಾ ಮಳೆ, ಕೊರೊನಾ ಸೋಂಕು, ಹಬ್ಬ ಹರಿದಿನ ಇದ್ದೇಲ್ಲದರ ಮಧ್ಯೆ ಬೈ ಎಲೆಕ್ಷನ್.
ಸದ್ಯ ಎಲ್ಲರು ಎಲ್ಲವನ್ನು ನಿಬಾಯಿಸುತ್ತಿದ್ದಾರೆ ಇದಕ್ಕೆ ರಾಜಕೀಯ ನಾಯಕರು ಹೊರತ್ತಲ್ಲ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದುರ್ಗಾ ಪೂಜೆ ಮಾಡಿರುವ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟಾಂಗ್ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಡಿ.ಕೆ.ಶಿವಕುಮಾರ್ ಅವರು ಆಯುಧ ಪೂಜೆ ನಿಮಿತ್ತ ದುರ್ಗಾ ಪೂಜೆ ನೆರವೇರಿಸಿದ್ದು, ಈ ಫೋಟೋ ಹಂಚಿಕೊಂಡು ಸಚಿವ ಸಿ.ಟಿ.ರವಿ ಟ್ವೀಟ್ ಮಾಡುವ ಮೂಲಕ ಕಾಲೆಳೆದಿದ್ದಾರೆ.
ಇವರು ಹೇಗೆ ಮತ್ತು ಏಕೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾದರೆಂದು ನಿಮಗೆ ತಿಳಿದಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ದುರ್ಗಾ ಪೂಜೆ ನೆರವೇರಿಸಿದ್ದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಬೃಹತ್ ಭಾವಚಿತ್ರದ ಮುಂದೆಯೇ ದುರ್ಗೆಯ ಫೋಟೋ ಇಟ್ಟು ಪೂಜೆ ಮಾಡಿದ್ದರು.
ಈ ಕುರಿತು ಸಾಕಷ್ಟು ಚರ್ಚೆ ಸಹ ನಡೆದಿತ್ತು. ಇದೀಗ ಸಚಿವ ಸಿಟಿ ರವಿ ಸಹ ಕಾಲೆಳೆದಿದ್ದಾರೆ.
ಈ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚೀನಾ ಕುರಿತು ಮಾತನಾಡಿದ ವಿಡಿಯೋ ಟ್ವೀಟ್ ಮಾಡಿ ಭಾರತದ ನಂಬರ್-1 ಕಾಮಿಡಿ ರತ್ನ ಇವರು ಎಂದು ಬರೆದು ವಿಡಿಯೋ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದರು.
PublicNext
26/10/2020 10:20 pm