ಕಲಬುರಗಿ-ನೆರೆ ಪ್ರದೇಶಗಳಲ್ಲಿ ಭೇಟಿ ನೀಡುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಳೆಹಾನಿ ಬಗೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನೆರೆ ಪ್ರದೇಶಗಳಲ್ಲಿ ಯಡಿಯೂರಪ್ಪ ಕೇವಲ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಮೇಲಿಂದ ಬಂದು ಅಲ್ಲಿಂದಲೇ ನೋಡಿ ವಾಪಸ್ ಹೋಗಿದ್ದಾರೆ. ಸಂತ್ರಸ್ಥರನ್ನು ಭೇಟಿಯಾಗಿ ಅವರ ಕಷ್ಟ ಕೇಳಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಹಲವು ತಿಂಗಳಿಂದ ಈ ಕಡೆ ತಲೆ ಹಾಕಿಲ್ಲ ಎಂದರು.
ಕಂದಾಯ ಸಚಿವ ಆರ್ ಅಶೋಕ್ ಪಿಕ್ ನಿಕ್ ಬಂದಂತೆ ಕಲಬುರಗಿ ಜಿಲ್ಲೆಗೆ ಬಂದು ಹೋಗಿದ್ದಾರೆ. ಹೀಗಾಗಿ ಇಲ್ಲಿನ ಅಧಿಕಾರಿಗಳಿಗೆ ಲಂಗು ಲಗಾಮಿಲ್ಲದಂತಾಗಿದೆ ಎಂದರು.
ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ಸೋತಿದೆ. ಇದೇ ವಿಷಯವಾಗಿ ನಾನು ಸರ್ಕಾರ ದಮ್ ಇಲ್ಲ ಎಂಬ ಹೇಳಿಕೆ ನೀಡಿದ್ದು. ಕೆಲವರು ಅದನ್ನ ದೈಹಿಕ ದಮ್ ಎಂದು ತಿಳಿದಿದ್ದಾರೆ. ನಾನು ದೈಹಿಕ ಧಮ್ ಬಗ್ಗೆ ಯಾವತ್ತೂ ಮಾತನಾಡೋಲ್ಲ ಎಂದು ಸಿದ್ದರಾಮಯ್ಯ ಹೇಳಿದ್ರು.
ಹಿಂದಿನ ಸರ್ಕಾರ ಕೆಡವಲು ಸಿದ್ದರಾಮಯ್ಯ ವಿಲನ್ ಆಗಿದ್ದರು ಎಂಬ ಕುಮಾರಸ್ವಾಮಿ ಅವರ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ನಾನು ವಿಲನ್ ಅಲ್ಲ. ಯಾವತ್ತಿಗೂ ಹೀರೋ ಆಗಿಯೇ ಇರ್ತೀನಿ ಎಂದು ತಿರುಗೇಟು ನೀಡಿದರು.
PublicNext
26/10/2020 01:51 pm