ಕರಾಚಿ- ಕಾರ್ಗಿಲ್ ಯುದ್ಧದಿಂದ ನಾವು ಸಾಧಿಸಿದ್ದು ಏನೂ ಇಲ್ಲ. ಆದ್ರೆ ಅದರಿಂದ ಕೆಚ್ಚೆದೆಯ ಸೈನಿಕರ ಸಾವುಗಳಾಗಿವೆ. ಯುದ್ಧ ನಡೆದಾಗ ನಮ್ಮ ಸೈನಿಕರ ಬಳಿ ಶಸ್ತ್ರಾಸ್ತ್ತಗಳು ಸಹಿತ ಇರಲಿಲ್ಲ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಹೇಳಿದ್ದಾರೆ.
ಅಲ್ಲಿನ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ 11 ಪ್ರತಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡ ಅವರು ಹೀಗೆ ಹೇಳಿದ್ದಾರೆ.
ಕಾರ್ಗಿಲ್ ಯುದ್ಧ ಆರಂಭವಾಗಿದ್ದು ಸೈನಿಕರಿಂದ ಅಲ್ಲ. ಬದಲಾಗಿ ಕೆಲವು ಜನರಲ್ ಗಳಿಂದ ಅದರ ಫಲವಾಗಿ ಕೇವಲ ಸೈನಿಕರ ಸಾವುಗಳಾದವು. ಹೊರತಾಗಿ ಬೇರೇನೂ ಸಿಗಲಿಲ್ಲ. ಜನರಲ್ ಗಳು ಸೈನಿಕರನ್ನಲ್ಲದೇ ಜನರನ್ನೂ ಯುದ್ಧಕ್ಕೆ ತಳ್ಳಿದರು. ಜನರಲ್ ಗಳ ಹಿತಾಸಕ್ತಿಗಾಗಿ ಸೈನಿಕರು ಪ್ರಾಣ ಬಿಡಬೇಕಾಯ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
PublicNext
26/10/2020 12:30 pm