ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೆರೆಮರೆಯ ತಿಕ್ಕಾಟ-ಅಭ್ಯರ್ಥಿಗಳಿಗೆ ಸಂಕಟ

ಬೆಂಗಳೂರು- ಕಾಂಗ್ರೆಸ್ ಪಕ್ಷದ ಇಬ್ಬರು ಘಟಾನುಘಟಿ ನಾಯಕರ ನಡುವೆ ಈಗ ಶೀತಲ ಸಮರ ಶುರುವಾಗಿದೆ. ಅದು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಡುವೆ. ಉಪಚುನಾವಣೆಯ ಸಂದರ್ಭದಲ್ಲಿ ಈ ಇಬ್ಬರೂ ನಾಯಕರ ಈ ಶೀತಲ ಸಮರದಿಂದ ಅಭ್ಯರ್ಥಿಗಳಿಗೆ ಆತಂಕ ಶುರುವಾಗಿದೆ.

ಆಗಿದ್ದು ಏನೆಂದರೆ ಆರ್ ಆರ್ ನಗರದ ಉಪಚುನಾವಣೆಯನ್ನು ಡಿಕೆ ಸಹೋದರರು ಪ್ರತಿಷ್ಟೆಯಾಗಿ ಸ್ವೀಕರಿಸಿದ್ದಾರೆ. ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲೇಬೆಕೆಂಬ ರಾಜಕೀಯ ಧಾವಂತದಲ್ಲಿದ್ದಾರೆ. ಹೀಗಾಗಿ ಶಿರಾ ಉಪಚುನಾವಣೆಯತ್ತ ಅಷ್ಟಾಗಿ ಗಮನ ಹರಿಸುತ್ತಿಲ್ಲ. ಇನ್ನು ಶಿರಾ ಉಪಚುನಾವಣಾ ಅಖಾಡದತ್ತ ಹೆಚ್ಚು ಒಲವು ತೋರುತ್ತಿರುವ ಸಿದ್ದರಾಮಯ್ಯ ಆರ್ ಆರ್ ನಗರದ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೂ ಬಂದಿರಲಿಲ್ಲ. ಹೀಗಾಗಿ ಈ ಎಲ್ಲ ನಡೆಗಳು ಉಭಯ ನಾಯಕರ ನಡುವೆ ಮುಸುಕಿನ ಗುದ್ದಾಟ ಇರುವುದನ್ನು ತೋರ್ಪಡಿಸುತ್ತಿದೆ.

ಶಿರಾದಲ್ಲಿ ಮಾತ್ರ ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಸಿದ್ದರಾಮಯ್ಯ ಈಗ ನೆರೆ ಪೀಡಿತ ಪ್ರದೇಶಗಳತ್ತ ಗಮನ ಹರಿಸಿದ್ದಾರೆ. ಹೀಗಾಗಿ ಈ ಆಂತರಿಕ ಕಲಹ ಬಿಜೆಪಿಗೆ ಲಾಭ ಮಾಡಿಕೊಡಬಹುದಾ ಎನ್ನುವ ಊಹಾಪೋಹಗಳು ಎದ್ದಿವೆ.

Edited By : Nagaraj Tulugeri
PublicNext

PublicNext

26/10/2020 12:07 pm

Cinque Terre

68.27 K

Cinque Terre

6

ಸಂಬಂಧಿತ ಸುದ್ದಿ