ಬೆಂಗಳೂರು: ವಿಶ್ವದ ದುಬಾರಿ ಸೆಡಾನ್ ರೋಲ್ಸ್ ರಾಯ್ಸ್ ಫ್ಯಾಂಟಮ್, ಫೆರಾರಿ, ಮರ್ಸಿಡಿಸ್ ಬೆಂಝ್ ಸೇರಿದಂತೆ 8 ಐಷಾರಾಮಿ ಕಾರುಗಳಿಗೆ ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಎಂಟಿಬಿ ನಾಗರಾಜ್ ಆಯುಧ ಪೂಜೆ ಸಲ್ಲಿಸಿದ್ದಾರೆ.
ಎಂಟಿಬಿ ನಾಗರಾಜ್ ಅವರು ಮಹದೇವಪುರ ಬಳಿ ಇರುವ ತಮ್ಮ ಆಚಂದ್ರಾರ್ಕ ನಿಲಯದಲ್ಲಿ ಕಾರುಗಳಿಗೆ ಪೂಜೆಯನ್ನು ಮಾಡಿದರು. ಜೊತೆಗೆ ತಮ್ಮ ಲೈಸೆನ್ಸ್ ಹೊಂದಿದ ಪಿಸ್ತೂಲ್ ಗೆ ಸಹ ಪೂಜೆ ಸಲ್ಲಿಸಿದರು. ಈ ವೇಳೆ ಅವರ ಕುಟುಂಬ ಸದಸ್ಯರು ಭಾಗಿಯಾಗಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕರ್ನಾಟಕಕ ಶ್ರೀಮಂತ ರಾಜಕಾರಣಿಯಾಗಿರುವ ಎಂಟಿಬಿ ಜೂನ್‌ನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ವೇಳೆ ನಾಮಪತ್ರ ಸಲ್ಲಿಸುವಾಗ ತಮ್ಮ ಬಳಿ 1,224 ಕೋಟಿ ಆಸ್ತಿ ಇದೆ ಎಂದು ಘೋಷಣೆ ಮಾಡಿದ್ದರು. ಅಷ್ಟೇ ಅಲ್ಲದೆ ಕಳೆದ ವರ್ಷ ಅವರು ವಿಶ್ವದ ದುಬಾರಿ ಸೆಡಾನ್ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ಖರೀದಿಸಿದ್ದರು. ಮೂಲ ಬೆಲೆ ಹಾಗೂ ತೆರಿಗೆ ಸೇರಿದಂತೆ ಒಟ್ಟು 12.75 ಕೋಟಿ ರೂ. ಮೌಲ್ಯದ ಈ ಐಷಾರಾಮಿ ಕಾರು ಇಂಗ್ಲೆಂಡಿನಲ್ಲಿ ತಯಾರಾಗಿತ್ತು.
PublicNext
25/10/2020 04:50 pm