ಬೆಂಗಳೂರು: ನಿಮ್ಮ ಆಡಳಿತ ರೈತರ ಪಾಲಿಗೆ ಟಿಪ್ಪು ಆಡಳಿತದಂತಿತ್ತು ಎಂದು ಬಿಜೆಪಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದೆ.
ಬಿಜೆಪಿ ಸರ್ಕಾರ ಜನವಿರೋಧಿ ಸರ್ಕಾರ. ಇಂತಹ ಭ್ರಷ್ಟ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದರು. ಇದಕ್ಕೆ ಟ್ವೀಟ್ ಮೂಲಕ ಖಾರವಾಗಿ ತಿರುಗೇಟು ನೀಡಿರುವ ಬಿಜೆಪಿ, ಮಾನ್ಯ ಸಿದ್ದರಾಮಯ್ಯ ಅವರೇ ನಿಮ್ಮ ಆಡಳಿತವು ರೈತರಿಗೆ ಟಿಪ್ಪು ಆಡಳಿತದಂತಿತ್ತು. ರೈತರ ಪಾಲಿಗೆ ಮರಣಕೂಪದಂತಿದ್ದ ನಿಮ್ಮ ಅವಧಿಯಲ್ಲಿ 3,000 ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡದ್ದು ದುರ್ದೈವ. ಅನ್ನದಾತರು ಸಾವಿಗೆ ಶರಣಾಗುತ್ತಿದ್ದರೆ ನೀವು ಮಾತ್ರ ನೆಮ್ಮದಿಯಾಗಿ ನಿದ್ರಿಸುತ್ತಿದ್ದಿರಿ, ಅಲ್ಲವೇ ಎಂದು ಪ್ರಶ್ನಿಸಿದೆ.
ಮತ್ತೊಂದು ಟ್ವೀಟ್‌ನಲ್ಲಿ ನಿಮ್ಮ ದುರಾಡಳಿತದಲ್ಲಿ ಬೆಳಗಾವಿಯ ರೈತ ವಿಠಲ ಅರಭಾವಿ ಆತ್ಮಹತ್ಯೆಯ ಮಾಡಿಕೊಂಡಾಗ, "ರೈತನ ಆತ್ಮಹತ್ಯೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ, ಚೆನ್ನಾಗಿ ಕುಡಿದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ" ಎಂದು ಹೇಳಿದ್ದಿರಿ. ಓಬ್ಬ ಮುಖ್ಯಮಂತ್ರಿಯಾಗಿ ಆಡುವ ಮಾತೇ ಇದು ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿ ಕುಟುಕಿದೆ.
2013-14ರಲ್ಲಿ 104 ರೈರತರು ಆತ್ಮಹತ್ಯೆಗೆ ಶರಣಾದರೆ, 2014-15ರಲ್ಲಿ 128 ರೈತರು, 2015-16 - 1,483 ರೈತರು, 2016-17 - 1,185 ರೈತರು, 2018-19 - 900 ರೈತರು ಆತ್ಮಹತ್ಯೆ ಮಾಡಿಕೊಂಡರು. ನಿಮ್ಮ ಅವಧಿಯಲ್ಲಿ 3 ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ, ಮುಖ್ಯಮಂತ್ರಿಯಾಗಿ ಅವರ ಕಣ್ಣೀರು ಓರೆಸುವ ಬದಲು ಟಿಪ್ಪು ಜಯಂತಿ ಆಚರಣೆಯಲ್ಲಿ ನಿರತರಾಗಿದ್ದಿರಿ, ಅಲ್ಲವೇ? ಎಂದು ಟೀಕಿಸಿದೆ.
PublicNext
25/10/2020 03:29 pm