ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನದ ಮಾತಿನಲ್ಲಿ ಮೋದಿ ಏನೇನು ಹೇಳಿದ್ರು ?

ನವದೆಹಲಿ- ಮನ್ ಕೀ ಬಾತ್ ನಲ್ಲಿ ಮಾತಾಡಿದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ವಿಜಯದಶಮಿ ಶುಭಾಶಯ ಕೋರಿದ್ದಾರೆ.

ಈ ಸಲದ ಮನ್ ಕೀ ಬಾತ್ ಹೈಲೈಟ್ಸ್ ಇಲ್ಲಿದೆ.

*ಭಾರತದಲ್ಲಿ ಇತರರಿಗೆ ಪಾಠ ಮಾಡಬಲ್ಲ ಮತ್ತು ವಿಶ್ವಕ್ಕೆ ಸ್ಫೂರ್ತಿಯಾಗಬಲ್ಲ ಜನರಿದ್ದಾರೆ.

*ಕೊರೊನಾ ಸಂಕಷ್ಟದ ಈ ಕಾಲದಲ್ಲಿ ಭಾರತದಲ್ಲಿ ತಯಾರಾದ ಖಾದಿ ಮಾಸ್ಕ್ ಗಳು ವಿದೇಶದಲ್ಲೂ ಜನಪ್ರಿಯತೆ ಗಳಿಸಿವೆ. ಮೆಕ್ಸಿಕೊದ ಒಕ್ಸಾಕಾ ಪ್ರದೇಶದಲ್ಲಿಯೂ ಖಾದಿ ಮಾಸ್ಕ್ ತಯಾರಿಸಲಾಗ್ತಾ ಇದೆ. ಖಾದಿ ಬಟ್ಟೆ ಪರಿಸರ ಸ್ನೇಹಿ ಹಾಗೂ ಆರೋಗ್ಯಕ್ಕೆ ಪೂರಕವಾದದ್ದು ಎಂದಿದ್ದಾರೆ‌.

*ಹಬ್ಬದ ಸಂಧರ್ಭದಲ್ಲೂ ಗಡಿ ಕಾಯುತ್ತಿರುವ ನಮ್ಮ ವೀರಯೋಧರಿಗಾಗಿ ಎಲ್ಲರೂ ತಮ್ಮ ಮನೆಯಲ್ಲಿ ದೀಪ ಹಚ್ಚಬೇಕಿದೆ

*ತಮ್ಮ ಅಂಗಡಿಯ ಒಂದು ಭಾಗವನ್ನು ಲೈಬ್ರರಿ ಮಾಡಿದ ತಮಿಳುನಾಡಿನ ಪೋನ್ ಮರಿಯಪ್ಪನ್ ಅವರನ್ನು ಶ್ಲಾಘಿಸುತ್ತೇನೆ

*ಈ ಬಾರಿಯ ದಸರಾ ಹಬ್ಬದ ದುರ್ಗಾ ಪೂಜೆಗೆ ಕೊರೊನಾ ಅಡಚಣೆ ತಂದಿದೆ.

*ಜ್ಞಾನಕ್ಕಿಂತ ಹೆಚ್ಚು ಪರಿಶುದ್ಧವಾದುದು ಬೇರೆ ಯಾವುದೂ ಇಲ್ಲ ಎಂದು ಗೀತೆ ಹೇಳಿದೆ.

*ರೈತರ ತಲಾದಾಯ ಹೆಚ್ಚಿಸಲು ಕೇಂದ್ರ ಸರ್ಕಾರ ಜಾರಿ ಮಾಡಿರುವ ಹೊಸ ಕೃಷಿ ಮಸೂದೆಗಳು ನೆರವಾಗಲಿವೆ‌.

*ಅಕ್ಟೋಬರ್ 31ರಂದು ನಾವು ಇಂದಿರಾ ಗಾಂಧಿ ಅವರನ್ನು ಕಳೆದುಕೊಂಡಿದ್ದೆವು. ಅವರಿಗೆ ನಮನಗಳು

* ಮುಂಬರುವ ಎಲ್ಲ ಹಬ್ಬಗಳಿಗೆ ಶುಭಾಶಯ. ಹಬ್ಬಗಳನ್ನು ಆಚರಿಸುವಾಗ ಕೊರೊನಾ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ

Edited By : Nagaraj Tulugeri
PublicNext

PublicNext

25/10/2020 01:51 pm

Cinque Terre

73.85 K

Cinque Terre

18

ಸಂಬಂಧಿತ ಸುದ್ದಿ