ಮೈಸೂರು-ಚುನಾವಣೆಯಲ್ಲಿ ಗೆದ್ದರೆ ಉಚಿತ ಕರೊನಾ ಲಸಿಕೆ ನೀಡಲಾಗುವುದು. ಹೀಗಂತಾ ಬಿಜೆಪಿ ಬಿಹಾರ ವಿಧಾನಸಭೆ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ.
ಇದಕ್ಕೆ ಸ್ವಪಕ್ಷದಲ್ಲೇ ಈಗ ಅಪಸ್ವರ ಎದ್ದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್ ವಿಶ್ವನಾಥ್ ಒಂದು ವೇಳೆ ಗೆಲ್ಲದಿದ್ರೆ ಜನರನ್ನ ಸಾಯಿಸ್ತೀರಾ ಎಂದು ಕಟುವಾಗಿ ಪ್ರಶ್ನೆ ಮಾಡಿದ್ದಾರೆ.
ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ಅವರು ಗೆದ್ದರೆ ಮಾತ್ರ ಲಸಿಕೆ ಕೊಡ್ತೀರಾ? ಹಾಗಾದ್ರೆ ಸೋತರೆ ಜನರನ್ನ ಸಾಯಿಸ್ತೀರಾ? ಯಾವುದೇ ರಾಜಕೀಯ ಪಕ್ಷ ಚುನಾವಣಾ ಪ್ರಣಾಳಿಕೆಗಳಲ್ಲಿ ಇಂತಹ ಗಂಭೀರ ವಿಷಯಗಳನ್ನು ಪ್ರಕಟಿಸಬಾರದು ಎಂದಿದ್ದಾರೆ
PublicNext
23/10/2020 04:49 pm