ವಾಷಿಂಗ್ಟನ್- ಭಾರತದ ಹವಾಮಾನ ಅತ್ಯಂತ ಕಲುಷಿತವಾಗಿದೆ. ಅತಿ ಕೆಟ್ಟ ಹವಾಮಾನವಿದೆ ಎಂದು ಅಮೆರಿಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಚುನಾವಣೆ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ ಅವರು ಚೀನಾ, ರಷ್ಯಾ, ಹಾಗೂ ಭಾರತದ ಹವಾಮಾನ ಗಮನಿಸಿ. ಆ ದೇಶಗಳಿಗೆ ಹೋಲಿಸಿದರೆ ಅಮೆರಿಕಾದಲ್ಲಿ ಉತ್ತಮ ಗಾಳಿ ಹಾಗೂ ಶುದ್ಧ ನೀರಿದೆ ಎಂದಿದ್ದಾರೆ.
ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆಗೆ ಕೇವಲ 12 ದಿನ ಬಾಕಿ ಉಳಿದಿದೆ. ಇದೇ ವರ್ಷ ಫೆಬ್ರುವರಿ ತಿಂಗಳಲ್ಲಿ ಭಾರತಕ್ಕೆ ಬಂದಿದ್ದ ಡೊನಾಲ್ಡ್ ಟ್ರಂಪ್ ಭಾರತವನ್ನು ಹಾಡಿ ಹೊಗಳಿದ್ದರು. ಆದ್ರೆ ಅಮೆರಿಕಾದ ಚುನಾವಣೆ ಹೊಸ್ತಿಲಲ್ಲಿ ಹೀಗೆ ಹೇಳಿದ್ದಾರೆ.
ಸದ್ಯ ಅಮೆರಿಕಾ ಅಧ್ಯಕ್ಷ ಚುನಾವಣೆಗೆ ತುರುಸಿನ ಪ್ರಚಾರ ನಡೆದಿದೆ. ಅಭ್ಯರ್ಥಿಗಳಾದ ಡೊನಾಲ್ಡ್ ಟ್ರಂಪ್ ಹಾಗೂ ಜೋ ಬಿಡನ್ ನಡುವೆ ಪೈಪೋಟಿ ಏರ್ಪಟ್ಟಿದೆ.
PublicNext
23/10/2020 10:02 am