ತುಮಕೂರು- ನಮ್ಮ ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ ಅವರಿಗೆ ಬಿಜೆಪಿ ನಾಯಕರು ಆಮಿಷವೊಡ್ಡಿದ್ದರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ತಮ್ಮ ಅಭ್ಯರ್ಥಿ ಪರ ಪ್ರಚಾರದಲ್ಲಿ ಪಾಲ್ಗೊಂಡ ನಂತರ ಅವರು ಈ ಹೇಳಿಕೆ ನೀಡಿದ್ದಾರೆ. ಸ್ವತಃ ಡಿಸಿಎಂ ಅವರೇ ನಮ್ಮ ಅಭ್ಯರ್ಥಿಯ ಮನೆಬಾಗಿಲಿಗೆ ಬಂದಿದ್ದರು.
ಆದ್ರೆ ಪಕ್ಷಕ್ಕೆ ನಿಷ್ಟರಾಗಿರುವ ನಮ್ಮ ಅಭ್ಯರ್ಥಿ ಅಮ್ಮಾಜಮ್ಮ ಅವರು ಈ ಆಮಿಷವನ್ನು ನಿರಾಕರಿಸಿದ್ದಾರೆ ಎಂದರು.
ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಬಂದಿರುವ ಸಿಎಂ ಪುತ್ರ ಬಿ. ವೈ ವಿಜಯೇಂದ್ರ ಅವರು ಹಣದ ಕಂತೆಯನ್ನೇ ತಂದಿದ್ದಾರೆ. ಮತ್ತು ಯುವಕರಿಗೆ ಆಮಿಷ ಕೊಟ್ಟು ಅವರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂದು ಶಿರಾಗೆ ಬಂದು ಪ್ರಚಾರ ನಡೆಸಿರುವ ಬಿ ವೈ ವಿಜಯೇಂದ್ರ ನಾಳೆ ಈ ಕಡೆ ತಿರುಗಿಯೂ ನೋಡಲ್ಲ. ಹೀಗಾಗಿ ಮತದಾರರು ಇಂತಹ ಯಾವುದೇ ಆಮಿಷಕ್ಕೆ ಒಳಗಾಗದೇ ಜೆಡಿಎಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
PublicNext
22/10/2020 11:00 am