ಭೋಪಾಲ್ : ಮದರಸಾಗಳು ಭಯೋತ್ಪಾದಕರನ್ನು ಬೆಳಸುತ್ತಿದೆ ಹೀಗಾಗಿ ಮದರಸಾಗಳಿಗೆ ಸರ್ಕಾರದ ಹಣವನ್ನು ಸ್ಥಗಿತಗೊಳಿಸಬೇಕು ಎಂದು ಮಧ್ಯಪ್ರದೇಶದ ಸಚಿವೆ ಉಷಾ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮದರಸಾಗಳಲ್ಲಿ ಭಯೋತ್ಪಾದಕರನ್ನು ಬೆಳೆಸುವುದರ ಮೂಲಕ ಜಮ್ಮು ಹಾಗೂ ಕಾಶ್ಮೀರವನ್ನು ಭಯೋತ್ಪಾದಕ ಕಾರ್ಖಾನೆಯನ್ನಾಗಿ ಮಾಡುತ್ತಿದ್ದಾರೆ.
ಹೀಗಾಗಿ ರಾಷ್ಟ್ರೀಯತೆಯನ್ನು ಅನುಸರಿಸಲು ಸಾಧ್ಯವಾಗದ ಮದರಸಾಗಳನ್ನು ಸದ್ಯ ಅಸ್ತಿತ್ವದಲ್ಲಿರುವ ಶಿಕ್ಷಣ ವ್ಯವಸ್ಥೆಯೊಂದಿಗೆ ವಿಲೀನಗೊಳಿಸಬೇಕು.
ಈ ಮೂಲಕ ಸಮಾಜದ ಸಂಪೂರ್ಣ ಪ್ರಗತಿ ಸಾಧಿಸಲು ಸಾಧ್ಯವಿದೆ ಎಂದು ಹೇಳಿದ್ದಾರೆ.
ಮೂಲಭೂತವಾದಿಗಳು ಹಾಗೂ ಮದರಸಾಗಳು ಇಂತಹ ಮದರಾಸಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ನೀವು ಈ ದೇಶದ ಪ್ರಜೆಗಳಾದರೆ ನಿಮಗೆ ಇದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಇತ್ತೀಚೆಗೆ ಅಸ್ಸಾಂ ಶಿಕ್ಷಣ ಮತ್ತು ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ಅವರು ಸಾರ್ವಜನಿಕ ಹಣದಿಂದ ಧಾರ್ಮಿಕ ಶಿಕ್ಷಣವನ್ನು ಕಲಿಸಲು ಅವಕಾಶ ನೀಡಲು ಸಾಧ್ಯವಿಲ್ಲ.
ಹೀಗಾಗಿ ನಮ್ಮ ಸರಕಾರ ಎಲ್ಲಾ ಮದರಸಾ ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚಲಿದೆ ಎಂದು ಹೇಳಿದ್ದರು.
PublicNext
21/10/2020 10:18 am