ಪಾಟ್ನಾ: ಎಮ್ಮೆ ಮೇಲೆ ಕುಳಿತು ಚುನಾವಣಾ ಪ್ರಚಾರ ನಡೆಸಿದ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲಾದ ಪ್ರಸಂಗವೊಂದು ಬಿಹಾರದಲ್ಲಿ ನಡೆದಿದೆ.
ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗಯಾ ಕ್ಷೇತ್ರದಿಂದ ರಾಷ್ಟ್ರೀಯ ಉಲಮಾ ಕೌನ್ಸಿಲ್ ಪಕ್ಷದ ಅಭ್ಯರ್ಥಿಯಾಗಿ ಮೊಹಮ್ಮದ್ ಪರ್ವೇಜ್ ಸ್ಪರ್ಧಿಸಿದ್ದಾರೆ. ಆದರೆ ಸೋಮವಾರ ಎಮ್ಮೆ ಮೇಲೆ ಕುಳಿತು ಪ್ರಚಾರ ನಡೆಸಿದರು. ಅಷ್ಟೇ ಅಲ್ಲದೆ ಕೋವಿಡ್-19 ನಿರ್ಬಂಧನೆಗಳನ್ನು ಉಲ್ಲಂಘಿಸಿದರು. ಹೀಗಾಗಿ ಅವರ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಅಡಿ ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗಯಾ ನಗರದ ಗಾಂಧಿ ಮೈದಾನದಿಂದ ಸ್ವರಾಜ್‌ಪುರಿ ರಸ್ತೆ ತಲುಪಿದ ಕೂಡಲೇ ಮೊಹಮ್ಮದ್ ಪರ್ವೇಜ್ ಅವರನ್ನು ಬಂಧಿಸಿದ್ದಾರೆ.
PublicNext
19/10/2020 04:24 pm