ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈ ಎಲೆಕ್ಷನ್ ಬುಲಾವ್ : ಡಿಕೆಶಿ ಹಾಳೂರಿನಲ್ಲುಳಿದ ಗೌಡ: ಸಿ.ಟಿ ರವಿ ವ್ಯಂಗ್ಯ

ಬೆಂಗಳೂರು: ಆರ್.ಆರ್. ನಗರ ಉಪ ಚುನಾವಣೆ ಹಿನ್ನಲೆಯಲ್ಲಿ ಕ್ಷೇತ್ರದ ಕಾಂಗ್ರೆಸ್, ಜೆಡಿಎಸ್ ಮುಖಂಡರು ಬಿಜೆಪಿ ಸೇರ್ಪಡೆಯಾದರು.

ಈ ವೇಳೆ ನಗರದ ಖಾಸಗಿ ಹೊಟೇಲ್ ನಲ್ಲಿ ಮುಖಂಡರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ದಕ್ಷಿಣ ಭಾರತ ಬಿಜೆಪಿ ಉಸ್ತುವಾರಿ ಸಿಟಿ ರವಿ,ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಳೂರಿನಲ್ಲಿ ಉಳಿದ ಏಕೈಕ ಗೌಡನಿದ್ದಂತೆ ಎಂದು ಲೇವಡಿ ಮಾಡಿದ್ದಾರೆ.

ನಾಯಕತ್ವ ಎನ್ನುವುದು ಜೊತೆಗೆ ಇರುವವರನ್ನು ಮುಗಿಸುವುದಲ್ಲ, ಬೆಳೆಸುವುದು. ರಾಮನಗರದಲ್ಲಿ ಡಿಕೆ ಶಿವಕುಮಾರ್ ನೇತ್ರತ್ವದಲ್ಲಿ ಒಂದೇ ಕ್ಷೇತ್ರ ಗೆದ್ದಿದೆ.

ಡಿಕೆಶಿ ಹಾಳೂರಿಗೆ ಉಳಿದವನೇ ಗೌಡನಿದ್ದಂತೆ. ಉಪಚುನಾವಣೆಯಲ್ಲಿ ಈ ಹಾಳು ಗೌಡ ಜಾತಿ ತರುತ್ತಿದ್ದಾರೆ ಅಶೋಕ್ ಅವರಂತೆ ನಾನು ಒಕ್ಕಲಿಗ ಎನ್ನುತ್ತಿದ್ದಾರೆ.

ತಮ್ಮದೇ ಪಕ್ಷದ ದಲಿತ ನಾಯಕರ ಮನೆಗೆ ಬೆಂಕಿ ಹಾಕಿಸಿದವರು ಇದೀಗ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Edited By : Nirmala Aralikatti
PublicNext

PublicNext

19/10/2020 08:05 am

Cinque Terre

69.56 K

Cinque Terre

1

ಸಂಬಂಧಿತ ಸುದ್ದಿ