ಬೆಂಗಳೂರು : ಬೈ ಎಲೆಕ್ಷನ್ ಶುರುವಾದಾಗಿನಿಂದ ಮತಕ್ಕಾಗಿ ಭಾರಿ ಲಾಬಿಗಳು ನಡೆಯುತ್ತಲೇ ಇವೆ.
ನವೆಂಬರ್ 3ರಂದು R.R.ನಗರ ಕ್ಷೇತ್ರಕ್ಕೆ ಉಪಚುನಾವಣೆ ಹಿನ್ನೆಲೆಯಲ್ಲಿ ಒಕ್ಕಲಿಗ ಮತಗಳನ್ನ ಸೆಳೆಯಲು ತೆರೆಮರೆಯಲ್ಲಿ ಕಸರತ್ತು ನಡೆದಿದೆ.
ಸಚಿವ ಆರ್.ಅಶೋಕ್ ಮುಖಾಂತರ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಕ್ಷೇತ್ರದ ಒಕ್ಕಲಿಗ ಮುಖಂಡರನ್ನು ಭೇಟಿಯಾಗಿ ಒಕ್ಕಲಿಗ ಸಮುದಾಯದ ಬಿಬಿಎಂಪಿ ಮಾಜಿ ಸದಸ್ಯರು ಮತ್ತು ಒಕ್ಕಲಿಗ ಮುಖಂಡರನ್ನು ಬಿಜೆಪಿಗೆ ಸೇರಿಸಲು ಪ್ಲ್ಯಾನ್ ಮಾಡಿದ್ದರು.
ಅದರಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು, ಸಚಿವ ಆರ್.ಅಶೋಕ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತು R.R.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಸಮ್ಮುಖದಲ್ಲಿ R.R.ನಗರ ಜೆಡಿಎಸ್, ಕಾಂಗ್ರೆಸ್ ಮುಖಂಡರು BJPಗೆ ಸೇರ್ಪಡೆಯಾಗಿದ್ದಾರೆ.
ಮತ್ತೆ ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಕಾಂಗ್ರೆಸ್ ನ ಬಿಬಿಎಂಪಿ ಮಾಜಿ ಸದಸ್ಯ ಶ್ರೀನಿವಾಸಮೂರ್ತಿ, ಜಾಲಹಳ್ಳಿ ವಾರ್ಡ್ BBMP ಮಾಜಿ ಸದಸ್ಯ ನಾರಾಯಣಸ್ವಾಮಿ, ಯಶವಂತಪುರ ಬಿಬಿಎಂಪಿ ಮಾಜಿ ಸದಸ್ಯ ಜಿ.ಕೆ.ವೆಂಕಟೇಶ್, ಹೆಚ್ಎಂಟಿ ವಾರ್ಡ್ BBMP ಮಾಜಿ ಸದಸ್ಯೆ ಆಶಾ ಸುರೇಶ್, ವೇಲು ನಾಯ್ಕರ್, ಕೊಟ್ಟಿಗೆಪಾಳ್ಯ ಮೋಹನ್ ಕುಮಾರ್, ಲಗ್ಗೆರೆ ಮಾಜಿ ಬಿಬಿಎಂಪಿ ಸದಸ್ಯ ಸಿದ್ದೇಗೌಡ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
PublicNext
18/10/2020 04:00 pm