ಬೆಂಗಳೂರು: ಬೈ ಎಲೆಕ್ಷನ್ ಗಾಗಿ ಅಬ್ಬರದ ಪ್ರಚಾರ ನಡೆಯುತ್ತಿದೆ.
ಆಯಾ ಅಭ್ಯರ್ಥಿಗಳ ಪರ ಮತ ಯಾಚಿಸುವಲ್ಲಿ ರಾಜಕೀಯ ನಾಯಕರುಗಳು ಅತ್ಯಂತ ಸಕ್ರಿಯವಾಗಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರು, ರಾಜರಾಜೇಶ್ವರಿ ನಗರ ಕ್ಷೇತ್ರದ್ರಲ್ಲಿ ಮತದಾರರು ಆತಂಕದಲ್ಲಿದ್ದಾರೆ.
ತಮ್ಮ ಮತಗಳು ಮಾರಾಟವಾಗಿವೆ ಎಂದು ಗಾಬರಿಯಲ್ಲಿದ್ದಾರೆ. ಮತದಾರರ ಭಾವನೆಗಳೇನು ಎನ್ನುವುದು ನವೆಂಬರ್ 3 ರಂದು ವ್ಯಕ್ತವಾಗಲಿದೆ ಎಂದು ಎಂದರು.
ನಮ್ಮ ಪಕ್ಷದಲ್ಲಿ ಬಹಳಷ್ಟು ಉತ್ತಮ ಪ್ರಗತಿಯಾಗಿದ್ದು, ಕಾರ್ಯಕರ್ತರಿಗೆ ಆತ್ಮವಿಶ್ವಾಸ ಬಂದಿದೆ. ಚುನಾವಣಾ ವೀಕ್ಷಕರ ಸಭೆಯಲ್ಲಿ ಈ ಬಗ್ಗೆ ಸತ್ಯಾಂಶ ತಿಳಿಯಲಿದೆ ಎಂದು ಹೇಳಿದ್ದಾರೆ.
ಆರ್ ಆರ್ ನಗರದಲ್ಲಿ ಒಕ್ಕಲಿಗ ತಂತ್ರ ಹೂಡಲಾಗಿದೆ. ಇದಕ್ಕಾಗಿಯೇ ದಿ. ಐಎಎಸ್ ಅಧಿಕಾರಿ ಡಿಕೆ ರವಿ ಅವರ ಹೆಂಡತಿ ಕುಸುಮಾ ಅವರನ್ನು ಕಣಕ್ಕೆ ಇಳಿಸಲಾಗಿದೆ.
ಡಿಕೆಶಿ ಜಾತಿ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂಬ ಜೆಡಿಎಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನನ್ನ ಪೋಷಕರು ಒಕ್ಕಲಿಗರು ಆದ ಕಾರಣ ನಾನು ಒಕ್ಕಲಿಗನಾದೆ.
ನಾನು ಒಕ್ಕಲಿಗ ಎಂಬ ಬಗ್ಗೆ ನನಗೆ ಹೆಮ್ಮೆ ಇದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ.
ಹಾಗೇಂದ ಮಾತ್ರಕ್ಕೆ ನಾನು ಜಾತಿ ರಾಜಕಾರಣ ಮಾಡುವುದಿಲ್ಲ. ನನ್ನ ಜಾತಿ ಕಾಂಗ್ರೆಸ್ ಎಂದು ತಿರುಗೇಟು ನೀಡಿದರು.
PublicNext
17/10/2020 10:19 pm