ಬೆಂಗಳೂರು: ಏಳು ತಿಂಗಳ ನಂತರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತವರೂರು ಶಿಕಾರಿಪುರಕ್ಕೆ ಅ.18 ರಂದು ಬೆಂಗಳೂರಿನಿಂದ
ಪ್ರಯಾಣ ಬೆಳೆಸಲಿದ್ದು ಸಂಜೆ 4 ಗಂಟೆಗೆ ಶಿಕಾರಿಪುರ ತಲುಪಲಿದ್ದಾರೆ.
ಲಾಕ್ ಡೌನ್ ಮುಂಚೆ ಫೆಬ್ರವರಿಯಲ್ಲಿ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಶಿಕಾರಿಪುರಕ್ಕೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅದಾದ ನಂತರ ಲಾಕ್ ಕೊರೋನಾ ಕಾರಣದಿಂದಾಗಿ ತವರಿಗೆ ಹೋಗಿರಲಿಲ್ಲ.
ದಸರಾ ಆರಂಭವಾಗುತ್ತಿದ್ದಂತೆಯೇ ಸಿಎಂ ತಮ್ಮ ಮನೆಯಲ್ಲಿ ಉಳಿದುಕೊಳ್ಳುವ ಸಾಧ್ಯತೆಯಿದೆ. ಮೂರು ದಿನಗಳ ಪ್ರವಾಸದಲ್ಲಿ ಸಿಎಂ ಆಪ್ತರು ಮತ್ತು ಕುಟುಂಬಸ್ಥರು ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ.
18ರಂದು ಮಧ್ಯಾಹ್ನ ಬೆಂಗಳೂರಿನಿಂದ ಹೊರಡುವ ಮುಖ್ಯಮಂತ್ರಿ ಸಂಜೆ 4ಕ್ಕೆ ಶಿಕಾರಿಪುರ ಹೆಲಿಪ್ಯಾಡ್‌ಗೆ ತಲುಪುವರು. ನಂತರ ತಮ್ಮ ಮನೆಯಲ್ಲೇ ತಂಗುವರು. 19ರಂದು 11ಕ್ಕೆ ಕಲ್ಲುವಡ್ಡು ಏತನೀರಾವರಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸುವರು. ಬಳಿಕ
ಉಡುತಡಿ ಅಕ್ಕಮಹಾದೇವಿ ಜನ್ಮಸ್ಥಳದ ಅಭಿವೃದ್ಧಿ ಕಾಮಗಾರಿ ವೀಕ್ಷಿಸುವರು, 20ರಂದು ಬೆಳಿಗ್ಗೆ 10ಕ್ಕೆ ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿರುವ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಉದ್ಘಾಟನೆ ನಡೆಸಲಿದ್ದಾರೆ. ಅಂದು ಮಧ್ಯಾಹ್ನ 2.30ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರು ತಲುಪಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
PublicNext
16/10/2020 08:19 am