ಹಾಸನ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಕಲಿ ಜಾತಿ ಪ್ರಮಾಣಪತ್ರ ನೀಡಿ ನಗರಸಭೆಗೆ ಆಯ್ಕೆಯಾದರೂ ಬಿಜೆಪಿ ಸದಸ್ಯ ಮೋಹನ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮೀಸಲಾತಿ ಕ್ಷೇತ್ರವಾಗಿರುವ ಹಾಸನ ನಗರಸಭೆ 34ನೇ ವಾರ್ಡ್‌ನಿಂದ ಮೋಹನ್ ಆಯ್ಕೆಯಾಗಿದ್ದಾರೆ. ಅವರು ತಮ್ಮ ಶಾಲಾ ದಾಖಲೆಗಳನ್ನ ತಿದ್ದಿ ಎಸ್‌ಟಿ ಪ್ರಮಾಣಪತ್ರ ಸಲ್ಲಿಸಿದ್ದರು. ಅವರ ತಂದೆಯ ಶಾಲಾ ದಾಖಲೆಗಳಲ್ಲಿ ಮರಾಠಾ ಎಂದು ಇದ್ದು ಇದು ಪ್ರವರ್ಗ 3ಬಿಗೆ ಸೇರುತ್ತದೆ. ಆದರೆ ಅವರು ತಮ್ಮ ಜಾತಿ ಕಲಂ ತಿದ್ದಿ ಮಹಾರಾಷ್ಟ್ರ ಗೊಂಡಾ ಸಮುದಾಯ ಎಂದು ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ದೂರಿದರು.
ಈ ಬಗ್ಗೆ ಕ್ರಮ ಕೈಗೊಳ್ಳಲು ದೂರು ನೀಡಿ ಎರಡು ವರ್ಷವಾದ್ರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಆಯ್ಕೆಯಾದ ಸದಸ್ಯ ಮೋಹನ್ ವಿರುದ್ಧ ಎಫ್‌ಐಆರ್ ದಾಖಲಾಗಬೇಕಾಗಿತ್ತು. ಆದರೆ ಈ ಕಡತವನ್ನ ಅಧಿಕಾರಿಗಳು ಏಕೆ ಇತ್ಯರ್ಥ ಮಾಡಿಲ್ಲ ಎಂದು ರೇವಣ್ಣ ಪ್ರಶ್ನಿಸಿದರು.
PublicNext
15/10/2020 03:30 pm