ಚೆನ್ನೈ: ರಾಜಕೀಯ ಮನುಷ್ಯನನ್ನು ಬದಲಿಸುತ್ತದೆಯೂ ಅಥವಾ ಮನುಷ್ಯನೇ ರಾಜಕೀಯಕ್ಕೆ ಬಂದ ಮೇಲೆ ಬದಲಾಗುತ್ತಾನೊ ತಿಳಿಯದು ಎನ್ನುವುದಕ್ಕೇ ನಟಿ ಖುಷ್ಬೂ ಸಾಕ್ಷಿ ಎಂದ್ರೆ ತಪ್ಪಾಗಲಾರದು.
ಹೌದು ಕೈ ಬಿಟ್ಟು ಕಮಲ ಮುಡಿದ ನಟಿ ಖಷ್ಬೂ ಸದ್ಯ ಕಾಂಗ್ರೆಸ್ ಪಕ್ಷವನ್ನು ಹೀನಾಯವಾಗಿ ಟೀಕಿಸಿದ್ದಾರೆ.
ಕಾಂಗ್ರೆಸ್ ಬುದ್ಧಿಮಾಂದ್ಯ ಪಕ್ಷವೆಂದು ಆ ಪಕ್ಷವನ್ನು ತೊರೆದ ನಂತರ ನನಗೆ ಗೊತ್ತಾಯ್ತು ಎಂದು ನಟಿ ಖುಷ್ಬೂ ಸುಂದರ್ ಅವರು ಹೇಳಿದ್ದಾರೆ.
ಇಂದು ಚೆನ್ನೈಗೆ ಬಂದು ಮಾಧ್ಯಮಗಳ ಜೊತೆ ಮಾತನಾಡಿರುವ ಖುಷ್ಬೂ, ಕಳೆದ ಆರು ವರ್ಷದಿಂದ ನಾನು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದೇನೆ.
ಪಾರ್ಟಿಗಾಗಿ ನಾನು ಬಹಳ ಶ್ರಮವಹಿಸಿ ಕೆಲಸ ಮಾಡಿದ್ದೇನೆ. ಈಗ ಪಾರ್ಟಿ ತ್ಯಜಿಸಿದ ನಂತರ ನಾನು ಇಷ್ಟು ದಿನ ಬುದ್ಧಿಮಾಂದ್ಯ ಪಕ್ಷದಲ್ಲಿ ಇದ್ದೆ ಎಂದು ನನಗೆ ಆರ್ಥವಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಕಾಂಗ್ರೆಸ್ ಪಕ್ಷವನ್ನು ಬುದ್ಧಿಮಾಂದ್ಯ ಪಕ್ಷವೆಂದ ಖುಷ್ಬೂ ವಿರುದ್ಧ ಹಲವಾರು ಕೈ ನಾಯಕರು ಕಿಡಿಕಾರಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಪಕ್ಷದ ನಾಯಕ ಕೆ.ಎಸ್ ಅಲಗಿರಿ, ಖುಷ್ಬೂ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದಕ್ಕೆ ನಮಗೆ ಯಾವುದೇ ನಷ್ಟವಿಲ್ಲ.
ಬಿಜೆಪಿಯವರು ಆಹ್ವಾನ ನೀಡದಿದ್ದರು ಪಕ್ಷ ಸೇರಿದ್ದಾರೆ. ಇದರಿಂದ ನಮಗೆ ಯಾವುದೇ ನಷ್ಟವಿಲ್ಲಎಂದಿದ್ದಾರೆ.
PublicNext
13/10/2020 07:49 pm