ಬೆಂಗಳೂರು: ಆರ್‌ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ವಿರುದ್ಧದ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಕಾಂಗ್ರೆಸ್ ನಾಯಕಿಯರು ಕಿಡಿಕಾರಿದ್ದಾರೆ.
ಡಿಕೆ ರವಿ ಚರ್ಚೆಯ ವಿಷಯವೇ ಅಲ್ಲ. ಅವರ ಹೆಸರನ್ನು ಯಾರು ಬಳಸಿಕೊಂಡರೂ ಅವರಿಗೆ ಒಳ್ಳೆಯದಾಗಲ್ಲ ಎಂದು ಬಿಜೆಪಿ ಶೋಭಾ ಕರಂದ್ಲಾಜೆ ಹೇಳಿದ್ದರು. ಇದರಿಂದಾಗಿ ಕಾಂಗ್ರೆಸ್ ಮಾಜಿ ಸಚಿವೆ ಉಮಾಶ್ರೀ ಮತ್ತು ಜಯನಗರ ಶಾಸಕಿ ಸೌಮ್ಯ ರೆಡ್ಡಿ, ಕೆಪಿಸಿಸಿ ಮಹಿಳಾ ಮೋರ್ಚಾ ಅಧ್ಯಕ್ಷೆ ಪುಷ್ಪಾ ಅಮರನಾಥ್ ಸೇರಿದಂತೆ ಅನೇಕರು ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಮಾಶ್ರೀ, 'ಪತಿ ಸತ್ತವರು ಚುನಾವಣೆಗೆ ನಿಲ್ಲಬಾರದು, ಗಂಡ ಬಿಟ್ಟವರು ಎಲೆಕ್ಷನ್‌ಗೆ ನಿಲ್ಲಬಾರದು ಎಂದು ಸಂವಿಧಾನದಲ್ಲಿ ಎಲ್ಲೂ ಬರೆದಿಲ್ಲ. ರಾಜಕೀಯಕ್ಕೆ ಬರೋದು ಚುನಾವಣೆಗೆ ನಿಲ್ಲೋದು ಮಹಿಳೆಯರ ಹಕ್ಕು. ಕುಸುಮಾ ವೈಫ್ ಆಫ್ ಡಿಕೆ ರವಿ ಅಂತಾನೇ ಹೇಳ್ತೀವಿ. ಇದನ್ನ ಕೇಳಲು ಅವರ್ಯಾರು ಎಂದು ಪ್ರಶ್ನಿಸಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ಅವರು ಅವರಿಗೆ ನೋವಾಗಿದೆ ಇವರಿಗೆ ನೋವಾಗಿದೆ ಎಂದು ಜ್ಯೋತಿಷ್ಯ ಹೇಳುವುದನ್ನು ನಿಲ್ಲಿಸಲಿ. ಅವರು ಜ್ಯೋತಿಷಿ ಅಲ್ಲ, ಸಂಸದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಲಿ ಎಂದು ಗುಡುಗಿದರು.
PublicNext
12/10/2020 03:06 pm