ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಇಬ್ಬರು ಸಚಿವರ ಖಾತೆಗಳು ಬದಲಾಗಲಿವೆ. ಸಚಿವ ಬಿ.ಶ್ರೀರಾಮುಲು ಕೈಯಲ್ಲಿರುವ ಆರೋಗ್ಯ ಖಾತೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರಿಗೆ ನೀಡಲು ಸಿಎಂ ಯಡಿಯೂರಪ್ಪ ನಿರ್ಧರಿಸಿದ್ದಾರೆ.
ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನಡುವೆ ಕೆಲ ಸಂವಹನ ಕೊರತೆ ಇದೆ ಎಂಬ ದೂರು ಕೇಳಿಬರುತ್ತಿತ್ತು. ಅಲ್ಲದೆ ಕೊರೊನಾ ತಡೆಗೆ ಒಬ್ಬರ ಬಳಿಯೇ ಈ ಎರಡೂ ಖಾತೆ ಇದ್ದರೆ ಸೂಕ್ತ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಖಾತೆ ಬದಲಾವಣೆ ನಿರ್ಧಾರ ಕೈಗೊಂಡಿದ್ದಾರೆ. ಇತ್ತ ಮೊದಲಿಂದಲೂ ಬಿ.ಶ್ರೀರಾಮುಲು ಆರೋಗ್ಯ ಇಲಾಖೆ ಬೇಡ, ಸಮಾಜ ಕಲ್ಯಾಣ ಇಲಾಖೆ ಕೊಡಿ ಎಂದು ಸಿಎಂ ಬಳಿ ಮನವಿ ಮಾಡುತ್ತಿದ್ದರು. ಇದೀಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜೊತೆಗೆ ಸಮಾಜ ಕಲ್ಯಾಣ ಖಾತೆಯನ್ನು ಶ್ರೀರಾಮುಲುಗೆ ಕೊಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಡಿಸಿಎಂ ಗೋವಿಂದ ಕಾರಜೋಳ ಅವರ ಬಳಿ ಇರುವ ಸಮಾಜ ಕಲ್ಯಾಣ ಖಾತೆಯು ಇನ್ಮುಂದೆ ಶ್ರೀರಾಮುಲು ಹೆಗಲಿಗೆ ಬೀಳಲಿದೆ.
PublicNext
11/10/2020 08:46 pm