ನವದೆಹಲಿ: ಮುಸ್ಲಿಮರ ಸಂತೋಷ ಅಳೆಯುವ ಮಾನದಂಡವೇನು ಎಂದು ಪ್ರಶ್ನಿಸುವ ಮೂಲಕ ಎಂಐಎಂ ಸಂಸದ ಅಸದುದ್ದೀನ್ ಓವೈಸಿ ಅವರು ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಪಂಚದಲ್ಲಿಯೇ ಭಾರತೀಯ ಮುಸ್ಲಿಮರು ಅತ್ಯಂತ ಸಂತೋಷವಾಗಿದ್ದಾರೆ ಎಂದು ಮೋಹನ್ ಭಾಗವತ್ ಹೇಳಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಓವೈಸಿ, "ಮುಸ್ಲಿಮರ ಸಂತೋಷ ಅಳೆಯುವ ಮಾನದಂಡವೇನು? ಅತ್ಯಂತ ಸಂತೋಷವಾಗಿರಲು ಮುಸ್ಲಿಮರು ಇತರ ಮುಸ್ಲಿಂ ರಾಷ್ಟ್ರಗಳೊಂದಿಗೆ ಪೈಪೋಟಿ ನಡೆಸುವುದಿಲ್ಲ. ನಿಮ್ಮ ಆರ್‌ಎಸ್ಎಸ್ ಸಿದ್ಧಾಂತಗಳ ಮೂಲಕ ದೇಶದಲ್ಲಿ ಮುಸ್ಲಿಮರನ್ನು ಎರಡನೇ ದರ್ಜೆ ನಾಗರೀಕರನ್ನಾಗಿಸಬೇಕು ಎಂದು ಕೊಂಡಿದ್ದೀರಾ? ದೇಶದ ಬಹುಸಂಖ್ಯಾತ ಸಮುದಾಯಗಳಿಗೆ ಮುಸ್ಲಿಮರು ಎಷ್ಟು ಕೃತಜ್ಞರಾಗಿರಬೇಕು ಎಂಬುದನ್ನು ನೀವು ನಮಗೆ ಹೇಳುವ ಅಗತ್ಯವಿಲ್ಲ" ಎಂದು ಕಿಡಿಕಾರಿದ್ದಾರೆ.
PublicNext
11/10/2020 07:07 pm