ಡೆಹಾರಡೂನ್: ಸುಪ್ರೀಂಕೋರ್ಟ್ ನಲ್ಲಿ ತ್ರಿಪಲ್ ತಲಾಖ್ ವಿರುದ್ಧ ಧ್ವನಿ ಎತ್ತಿದ್ದ ಶಯರಾ ಬನೋ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಡೆಹರಾಡೂನ್ ನಗರದ ಪಕ್ಷದ ಕಚೇರಿಯಲ್ಲಿ ಶಯರಾ ಬನೋ ಶನಿವಾರ ಕಮಲದ ಬಾವುಟ ಹಿಡಿದರು. ಉತ್ತರಾಖಂಡ ಬಿಜೆಪಿ ಅಧ್ಯಕ್ಷ ಬಸೀಂಧರ್ ಭಗತ್ ಮತ್ತು ಸಂಘಟನಾ ಕಾರ್ಯದರ್ಶಿ ಅಜಯ್ ಕುಮಾರ್ ಸಮ್ಮುಖದಲ್ಲಿ ಕಾರ್ಯಕ್ರಮ ನಡೆದಿತ್ತು.
2016ರಲ್ಲಿ ಶಯರಾ ಬನೋ ತ್ರಿವಳಿ ತಲಾಖ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. 15 ವರ್ಷಗಳ ದಾಂಪತ್ಯದ ಬಳಿಕ ಆಕೆಯ ಗಂಡ ಆಕೆಗೆ ತಲಾಖ್ ನೀಡಿದ್ದ. ಇವರ ಜತೆ ಜತೆಗೆ ಆಫ್ರಿನ್ ರೆಹಮಾನ್, ಗುಲ್ಶನ್ ಪರ್ವೀನ್, ಇಶ್ರತ್ ಜಹಾನ್ ಮತ್ತು ಆತಿಯಾ ಸಾಬ್ರಿ ಎಂಬ ಇತರ ನಾಳ್ವರು ಮಹಿಳೆಯರ ಅರ್ಜಿಗಳನ್ನೂ ಒಟ್ಟು ಸೇರಿಸಿ ವಿಚಾರಣೆ ನಡೆಸಲಾಗಿತ್ತು. ನಂತರ ಸುಪ್ರೀಂಕೋರ್ಟ್ ತ್ರಿವಳಿ ತಲಾಖ್ ನಿಷೇಧ ಮಾಡಿತ್ತು.
PublicNext
11/10/2020 03:06 pm